ದರ್ಶನ್ ಅವರಿಗೆ ದುಬಾರಿ ಬೆಲೆಯ ಬೈಕ್ ಹಾಗೂ ಕಾರುಗಳೆಂದರೆ ಸಖತ್ ಕ್ರೇಜ್. ಹೊಸ ಬೈಕ್ ಅಥವಾ ಕಾರು ಖರೀದಿಸಿದ ಕೂಡಲೇ ಅವರು ಅದನ್ನು ಪೂಜೆ ಮಾಡಿಸಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಬಿಡುವಿನ ವೇಳೆಯಲ್ಲಿ ತಮ್ಮಿಷ್ಟದ ಕಾರನ್ನು ತೆಗೆದುಕೊಂಡು ರಸ್ತೆಗಿಳಿಯುತ್ತಾರೆ.
#Exclusive___Video…😍🙏🔥💥🐘🔥🙏😍
“#ಟ್ರ್ಯಾಕ್ಟರ್ ಮೇಲೆ ಚಾಲೆಂಜಿಂಗ್ ಸ್ಟಾರ್-ದರ್ಶನ್ ಬಾಸ್ ಸವಾರಿ”😍
Darshan Thoogudeepa Srinivas 🙏
Madhu V Chakravarthy#ಜೈ__ತೂಗುದೀಪ__ಬಾಸ್ 🙏🐘🙏
Madhu V Chakravarthy ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 14, 2020
ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡಲು ಹೊಸ ವಾಹನ ಖರೀದಿ ಮಾಡಿದ್ದಾರೆ. ಅದುವೇ ಈ ಟ್ರ್ಯಾಕ್ಟರ್. ಸದ್ಯಕ್ಕೆ ದರ್ಶನ್ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ನಲ್ಲಿದ್ದಾರೆ. ಪ್ರಾಣಿಗಳ ಜೊತೆಗೆ ಹೆಚ್ಚಾಗಿ ಸಮಯ ಕಳೆಯುತ್ತಿರುವ ದರ್ಶನ್ ಅವುಗಳಿಗೆ ಉಪಯೋಗವಾಗಲಿ ಎಂದು ಒಂದು ಟ್ರ್ಯಾಕ್ಟರ್ ಖರೀದಿಸಿದ್ದಾರೆ.
ಹೊಸ ಟ್ರ್ಯಾಕ್ಟರ್ ಖರೀದಿಸಿದ ನಂತರ ತಮ್ಮ ಸ್ನೇಹಿತರನ್ನು ಜೊತೆ ಕೂರಿಸಿಕೊಂಡು ಓಡಿಸಿದ್ದಾರೆ. ದರ್ಶನ್ ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋವನ್ನು ಅಭಿಮಾನಿಯೊಬ್ಬರು ರೆಕಾರ್ಡ್ ಮಾಡಿಕೊಂಡು ತನ್ನ ಫೇಸ್ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಟ್ರ್ಯಾಕ್ಟರ್ ಓಡಿಸುತ್ತಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
