fbpx
ಸಮಾಚಾರ

‘ಸಿವಿಲ್ ಪೊಲೀಸ್ ವಾರ್ಡನ್’ ಆಗಲು ಯುವಜನತೆಗೆ ಪೊಲೀಸ್ ಕಮಿಷನರ್ ಆಹ್ವಾನ: ಸಂಭಾವನೆ ಎಷ್ಟು ಗೊತ್ತಾ?

ಮಂಗಳವಾರ ರಾತ್ರಿಯಿಂದ ಒಂದು ವಾರ ಬೆಂಗಳೂರು ನಗರ ಲಾಕ್‌ಡೌನ್‌ ಆಗುತ್ತಿದೆ. ಇದೇ ಸಮಯದಲ್ಲಿ ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕೆಲಸ ಮಾಡಲು ಯುವಜನತೆಗೆ ಆಹ್ವಾನ ನೀಡಿದ್ದಾರೆ.

‘ಕೊರೋನಾ ಸೋಂಕಿನಿಂದಾಗಿ ಪೊಲೀಸ್ ಸಿಬ್ಬಂದಿಯ‌ ತಕ್ಕಮಟ್ಟಿನ ಕೊರತೆ ಎದುರಾಗಿದೆ. ಹೀಗಾಗಿ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕೆಲಸ ಮಾಡಲು ಯುವಜನತೆಗೆ ನಗರ ಪೊಲೀಸ್ ಆಯುಕ್ತರು ಆಹ್ವಾನ ನೀಡಿದ್ದಾರೆ. ನಗರದಲ್ಲಿ 164 ಪೊಲೀಸ್ ಠಾಣೆಗಳಿದ್ದು, ಪ್ರತಿ ಪೊಲೀಸ್ ಠಾಣೆ ಮಟ್ಟದಲ್ಲಿ 100 ಸಿವಿಲ್ ಪೊಲೀಸರಿಗೆ ನಿಯೋಜನೆಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

 

 

ಈ ಬಗ್ಗೆ ಟ್ವೀಟ್‌ ಮಾಡಿರುವ ಬೆಂಗಳೂರು ನಗರದ ಕಮೀಷನರ್‌ ಭಾಸ್ಕರ್‌ ರಾವ್‌, ಕೊರೊನಾ ನಿಯಂತ್ರಣ ಹಾಗೂ ಕೊರೊನಾ ನಿಯಮಗಳನ್ನ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ದೈಹಿಕವಾಗಿ ಸದೃಢ ಹಾಗೂ ಸೇವಾ ಮನಸ್ಸಿನ ನಿವಾಸಿಗಳನ್ನ ಸಿವಿಲ್‌ ಪೊಲೀಸ್‌ ವಾರ್ಡನ್‌ಗಳಾಗಿ ಕಾರ್ಯನಿರ್ವಹಿಸಲು ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ. 18 ರಿಂದ 45 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬಹುದು ಎಂದು ರಾವ್‌ ತಿಳಿಸಿದ್ದಾರೆ.

 

 

ಸಂಭಾವನೆ ಇಲ್ಲ!
ಇನ್ನು ಕೊರೊನಾ ನಿಯಂತ್ರಣಕ್ಕಾಗಿ ನಾಗಿರಕ ಪೊಲೀಸ್‌ ವಾರ್ಡನ್‌ಗಳಾಗಿ ಸ್ವಯಂ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ನಿವಾಸಿಗಳಿಗೆ ಸಂಭಾವನೆ ನೀಡಲಾಗುತ್ತಿಲ್ಲ ಎಂದು ಬೆಂಗಳೂರು ಸಿಟಿ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ. ಸಂಭಾವನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಯಾವುದೇ ಸಂಭಾವನೆ ನೀಡಲಾಗುತ್ತಿಲ್ಲ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top