fbpx
ಸಮಾಚಾರ

ಕೊರೋನಾಗೆ ಭಾರತ ತತ್ತರ: ಒಂದೇ ದಿನ ದಾಖಲೆಯ 32,695 ಸೋಂಕು ಪತ್ತೆ, 9.70ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ಕೊರೊನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್ಡೌನ್ ಮಾಡಿ, ಸೋಂಕು ಹರಡುವಿಕೆ ತೀವ್ರವಾಗಿರುವಾಗ ಅನ್ ಲಾಕ್ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದಾಖಲೆಯ 32,695 ಮಂದಿಯಲ್ಲಿ ಪಾಸಿಟಿವ್ ಬಂದಿದೆ.

ಕಳೆದ 24 ಗಂಟೆಗಳಲ್ಲಿ 32,695 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 970,169ಕ್ಕೆ ತಲುಪಿದೆ. ಇದೇ ವೇಳೆ 606 ಮಂದಿ ಮಹಾಮಾರಿ ವೈರಸ್’ಗೆ ಒಂದೇ ದಿನ ಬಲಿಯಾಗಿದ್ದು, ಈ ವರೆಗೆ ವೈರಸ್’ಗೆ ಬಲಿಯಾದವರ ಸಂಖ್ಯೆ 24,915ಕ್ಕೆ ತಲುಪಿದೆ.

ಇದೇ ವೇಳೆ 21415 ಮಂದಿ ಸೋಂಕಿನಿಂದ ಗುಣಮುಖರಾಗಿದ್ಗು, 970,169 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 6,12,815ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 3,31,146 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top