ಲಾಕ್ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದ ಗುಜರಾತ್ನ ಸಚಿವರೊಬ್ಬರ ಪುತ್ರನ ವಿರುದ್ಧ ಕ್ರಮಕೈಗೊಂಡು ಗಮನಸೆಳೆದಿದ್ದ ಮಹಿಳಾ ಕಾನ್ಸ್ಟೆಬಲ್ ಸುನೀತಾ ಯಾದವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಕಳೆದ ವಾರ ಗುಜರಾತ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕಿಶೋರ್ ಕನಾನಿ ಅವರ ಪುತ್ರ ಪ್ರಕಾಶ್ ಕನಾನಿ ಗೆಳೆಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ವಾಹನ ತಪಾಸಣೆ ಮಾಡುತ್ತಿದ್ದ ಸುನೀತಾ, ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಕ್ಕೆ ಎಂದು ಕಾರಿನಲ್ಲಿರುವ ಯುವಕರನ್ನು ಪ್ರಶ್ನಿಸಿದ್ದಾರೆ.
#Gujarat. This video has gone viral showing heated arguments between a woman constable Sunita Yadav & son of BJP minister of state for health in Surat over breaking of night curfew rules. Yadav has resigned today apparantly in frustration as her seniors did nothing @DeccanHerald pic.twitter.com/jrieEPgmOm
— satish jha. (@satishjha) July 11, 2020
ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸುನೀತಾ ಜತೆ ಜಗಳಕ್ಕಿಳಿದಾಗ ಅದರಲ್ಲಿ ಒಬ್ಬ ಯುವಕ ಇದೇ ಜಾಗದಲ್ಲಿ ನಿನ್ನನ್ನು 365 ದಿನವೂ ನಿಲ್ಲುವಂತೆ ಮಾಡುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸುನೀತಾ, 365 ದಿನ ಹೀಗೆ ನಿಲ್ಲಲು ನಾನೇನು ನಿಮ್ಮಪ್ಪನ ಅಡಿಯಾಳು ಅಥವಾ ಸೇವಕಿ ಅಲ್ಲ ಎಂದು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಸುನೀತಾ ಅವರ ಧೈರ್ಯವನ್ನು ಕೊಂಡಾಡಿದ್ದರು.
ಈ ವೇಳೆ ನಡೆದಿದ್ದ ಬಿರುಸಿನ ಮಾತಿನ ಚಕಮಕಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸುನೀತಾ ಕೈಗೊಂಡ ಕ್ರಮದಿಂದಾಗಿ ಎಫ್ಐಆರ್ ದಾಖಲಿಸಿ ಮೂವರನ್ನು ಭಾನುವಾರ ಬಂಧಿಸಲಾಗಿತ್ತು. ನಂತರ, ಜಾಮೀನಿನ ಮೇಲೆ ಮೂವರನ್ನು ಬಿಡುಗಡೆ ಮಾಡಲಾಗಿದೆ.
“ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ, ಆದರೆ ನನ್ನ ಹಿರಿಯ ಅಧಿಕಾರಿಗಳಿಂದ ನನಗೆ ಬೆಂಬಲ ಸಿಗಲಿಲ್ಲ. ಈ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ. ತಾವು ಅತಿ ಗಣ್ಯ ವ್ಯಕ್ತಿಗಳೆಂದು ಸಚಿವರ ಪುತ್ರರು ಭಾವಿಸುತ್ತಾರೆ. ಇದು ನಮ್ಮ ವ್ಯವಸ್ಥೆಯಲ್ಲಿನ ದೋಷ’ ಎಂದು ಸುನೀತಾ ತಿಳಿಸಿದ್ದಾರೆ. ಎಂದು ಸುನಿತಾ ಯಾದವ್ ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
