fbpx
ಸಮಾಚಾರ

ತೆಲುಗು ನೆಲದಲ್ಲಿ 250ಕ್ಕೂ ಹೆಚ್ಚು ಕನ್ನಡಿಗರಿಗೆ ಕೆಲಸ ಕೊಟ್ಟ ಕಿಚ್ಚ ಸುದೀಪ್!

ಕೊರೊನಾ ಸಾಂಕ್ರಾಮಿಕ ಕಾರಣದಿಂದ ಸ್ಥಗಿತದೊಂಡಿದ್ದ ಚಿತ್ರರಂಗದ ಚಿತ್ರೀಕರಣಕ್ಕೆ ಸದ್ಯ ಮರುಚಾಲನೆ ಲಭಿಸುತ್ತಿದೆ. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಹೈದರಾಬಾದ್‍ನಲ್ಲಿ ಆರಂಭವಾಗಿದೆ. ವಿಶೇಷ ಎಂದರೇ ಚಿತ್ರದ ಶೂಟಿಂಗ್ ವೇಳೆ ಅಗತ್ಯವಿರುವ ಸಿಬ್ಬಂದಿಯನ್ನು ಬೆಂಗಳೂರಿನಿಂದಲೇ ಕರೆದುಕೊಂಡು ಹೋಗುವ ಮೂಲಕ ಕನ್ನಡಿಗರಿಗೆ ಮನ್ನಣೆ ನೀಡಲಾಗಿದೆ.

 

 

ಸಾಮಾನ್ಯವಾಗಿ ಹೊರ ರಾಜ್ಯಗಳಲ್ಲಿ ಚಿತ್ರೀಕರಣ ನಡೆದಾಗ ಅಲ್ಲಿನ ಕಾರ್ಮಿಕರಿಗೆ ಕೆಲಸ ನೀಡುವುದು ಸಂಪ್ರದಾಯ. ಆದರೆ ಈ ಭಾರಿ ಸುದೀಪ್‌ ಅವರ ಆಜ್ಞೆಯಂತೆ ಸರಿಸಮಾರು ಇನ್ನೂರೈವತ್ತು ಮಂದಿ ಕಾರ್ಮಿಕರನ್ನು ಬೆಂಗಳೂರಿನಿಂದಲೇ ಕರೆದುಕೊಂಡು ಹೋಗಿ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ.

 

 


ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದವರು ಬಾದ್ಶಾ ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ನಮ್ಮ ಕನ್ನಡದ ಕಾರ್ಮಿಕರಿಗೆ ಕೆಲಸ ಕೊಡಿ ಎಂದು ಮನವಿ ಮಾಡಿದ್ದರಂತೆ. ಹೀಗಾಗಿಯೇ ಹೈದರಾಬಾದ್​​ಗೆ ಇಲ್ಲಿನಿಂದಲೇ ಲೈಟ್​​ಬಾಯ್, ಸ್ಪಾಟ್​​ಬಾಯ್, ಟೆಕ್ನಿಕಲ್, ಯೂನಿಟ್, ನಿರ್ಮಾಣ ಸಹಾಯಕರು, ಸೆಟ್ ವರ್ಕರ್ಸ್ ಸೇರಿದಂತೆ ಎಲ್ಲ ಕಾರ್ಮಿಕರನ್ನೂ ಕರೆದೊಯ್ದಿದ್ದಾರೆ ಕಿಚ್ಚ. ಬರೋಬ್ಬರಿ 200ರಿಂದ 250 ಮಂದಿ ಕಾರ್ಮಿಕರನ್ನು ಹೈದರಾಬಾದ್​ಗೆ ಕರೆದೊಯ್ಯಲಾಗಿದೆ. ಆ ಮೂಲಕ ಕೆಲಸವಿಲ್ಲದೇ ಕಂಗೆಟ್ಟಿದ್ದ ಕೆಲಸಗಾರರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ ಫ್ಯಾಂಟಮ್ ಚಿತ್ರತಂಡ.

 

 

ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದ ಮೂರು ಮಹಡಿಗಳಲ್ಲಿ ದಟ್ಟ ಕಾಡು, ಝರಿ ಹಾಗೂ ಸಣ್ಣ ಕುಗ್ರಾಮದ ಸೆಟ್​ಗಳನ್ನು ನಿರ್ಮಿಸಲಾಗಿದೆ. ಕಲಾನಿರ್ದೇಶಕ ಶಿವಕುಮಾರ್ ಅವರ ನೇತೃತ್ವದಲ್ಲಿ ಅದ್ಧೂರಿ ಸೆಟ್​​ಗಳನ್ನು ನಿರ್ಮಿಸಿ ನಾಲ್ಕು ತಿಂಗಳೇ ಕಳೆದಿವೆ. ಈಗ ಇಲ್ಲಿ ಮತ್ತೆ ಶೂಟಿಂಗ್​ ಪ್ರಾರಂಭವಾಗಿದೆ. ವಿಘ್ನ ನಿವಾರಕ ಗಣೇಶನಿಗೆ ಪೂಜೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಮರುಚಾಲನೆ ನೀಡಿದೆ ಫ್ಯಾಂಟಮ್ ಚಿತ್ರತಂಡ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top