fbpx
ಸಮಾಚಾರ

12ನೇ ತರಗತಿ ಪರೀಕ್ಷೆ: ಎಲ್ಲಾ ವಿಷಯಗಳಲ್ಲೂ ಒಂದೇ ರೀತಿ ಅಂಕಗಳನ್ನು ಪಡೆದ ಅವಳಿ ಸಹೋದರಿಯರು!

ಅವಳಿಗಳು ನೋಟದಲ್ಲಿ ಒಂದೇ ರೀತಿಯಲ್ಲಿರುವುದು ಸಹಜ. ಆದರೆ, ನೋಯ್ಡಾದ ಈ ಅವಳಿ ಸಹೋದರಿಯರು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ತಲಾ ಶೇ.95.8ರಷ್ಟು ಅಂಕವನ್ನು ಗಳಿಸಿದ್ದಾರೆ. ಅಲ್ಲದೇ ಎಲ್ಲಾ ವಿಷಯದಲ್ಲೂ ಒಂದೇ ರೀತಿಯ ಅಂಕ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದೆಹಲಿ ಸಮೀಪದ ನೋಯ್ಡಾ ನಿವಾಸಿಗಳಾಗಿರುವ ಮಾನಸಿ ಮತ್ತು ಮಾನ್ಯ ಅವಳಿ ಸಹೋದರಿಯರು. ಇಬ್ಬರೂ ಗ್ರೇಟರ್ ನೋಯ್ಡಾದ ಆ್ಯಸ್ಟರ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಸಿಬಿಎಸ್ ಇ ದ್ವಿತೀಯ ಪಿಯುಸಿಯಲ್ಲಿ ಶೇ.95.8ರಷ್ಟು ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂಗ್ಲಿಷ್ ಹಾಗೂ ಕಂಪ್ಯೂಟರ್ ಸೈನ್ಸ್ ನಲ್ಲಿ 98ಅಂಕ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ 95 ಅಂಕ ಪಡೆದಿರುವುದಾಗಿ ವರದಿ ತಿಳಿಸಿದೆ.

“ಎಲ್ಲರೂ ನಮ್ಮನ್ನು ಅವಳಿಗಳೆಂದು ಅಚ್ಚರಿಯಿಂದ ನೋಡುತ್ತಾರೆ. ಉತ್ತಮ ಅಂಕಗಳನ್ನು ಗಳಿಸುತ್ತೇವೆ ಎನ್ನುವುದು ಇಬ್ಬರಿಗೂ ಗೊತ್ತಿತ್ತು. ಆದರೆ ಒಂದೇ ರೀತಿಯ ಅಂಕಗಳನ್ನು ಊಹಿಸಿರಲಿಲ್ಲ” ಎಂದು ಸಹೋದರಿಯರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top