fbpx
ಸಮಾಚಾರ

ನೆನಪಿರಲಿ ಪ್ರೇಮ್ ತಾಯಿಗೆ ಕೊರೋನಾ ಪಾಸಿಟಿವ್

ದಿನಕಳೆದಂತೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ಕೊರೊನಾ ಪಾಲಿಗೆ ಹಾಟ್‌ಸ್ಪಾಟ್ ಆಗಿದೆ. ಜನಸಾಮಾನ್ಯರು ಮಾತ್ರವಲ್ಲದೆ, ರಾಜಕಾರಣಿಗಳು, ಸಿನಿಮಾ ತಾರೆಯರಿಗೂ ಕೊರೊನಾ ತಗುಲುತ್ತಿದೆ. ಸದ್ಯ ಕನ್ನಡದ ಖ್ಯಾತ ನಟ ‘ನೆನಪಿರಲಿ’ ಪ್ರೇಮ್ ಅವರ ತಾಯಿಗೂ ಕೊರೊನಾ ವೈರಸ್ ತಗುಲಿದೆ.

ಲವ್ಲಿಸ್ಟಾರ್ ಪ್ರೇಮ್​​​ ಅವರ ತಾಯಿಗೆ ಕೂಡಾ ಕೊರೊನಾ ಸೋಂಕು ತಗುಲಿದೆ. ಸದ್ಯ ಪ್ರೇಮ್ ಅವರ ತಾಯಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿರುವ ನಟ ನೆನಪಿರಲಿ ಪ್ರೇಮ್ ತಾಯಿಗೆ 66 ವರ್ಷ ಆಗಿದ್ದು, ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ ನಂತರ ಕೊರೋನಾ ಸೋಂಕು ಇರುವುದು ಖಚಿತವಾಗಿದೆ. ಕುಟುಂಬಸ್ಥರು ಪರೀಕ್ಷೆ ಮಾಡಿಸಿದ್ದು, ಉಳಿದವರ ರಿಪೋರ್ಟ್‌ ನೆಗೆಟಿವ್ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top