fbpx
ಸಮಾಚಾರ

“ದೊಡ್ಡೋರಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯ” ಚಾಮುಂಡಿ ಬೆಟ್ಟದಲ್ಲಿ ತಾರತಮ್ಯದ ವಿರುದ್ಧ ತಿರುಗಿಬಿದ್ದ ಭಕ್ತರು

ಚಾಮುಂಡಿ ಬೆಟ್ಟ ಏರುವ ವಿಚಾರದಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸೆಲೆಬ್ರೆಟಿಗಳಿಗೊಂದು ಕಾನೂನು, ಜನ ಸಾಮಾನ್ಯರಿಗೊಂದು ಕಾನೂನಾ? ಎನ್ನುವ ಪ್ರಶ್ನೆ ಎದ್ದಿದೆ. ಈ ವಿಚಾರವಾಗಿ ಚಾಮುಂಡೇಶ್ವರಿ ಭಕ್ತರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಇಂದು ಕೊನೆ ಆಷಾಢ ಶುಕ್ರವಾರವಾಗಿದ್ದು, ಕೊರೊನಾ ಹಿನ್ನೆಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಭಂಧಿಸಲಾಗಿದೆ. ಚಾಮುಂಡಿ ಬೆಟ್ಟಕೆ ತೆರಳುವ ಎಲ್ಲಾ ಮಾರ್ಗಗಳು ಬಂದ್​ ಮಾಡಲಾಗಿದ್ದು, ಭಕ್ತರಿಗೆ ಪೊಲೀಸರು ನೋ ಎಂಟ್ರಿ ಎಂದಿದ್ದಾರೆ. ಇದರಿಂದ ಕೋಪಗೊಂಡ ಭಕ್ತರು ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ.

ಶೋಭಾ ಕರಂದ್ಲಾಜೆ, ದರ್ಶನ್‌ಗೆ ಬಿಡ್ತೀರ , ನಮಗೆ ಯಾಕೆ ಬಿಡಲ್ಲ? ದೇವರ ದರ್ಶನ ವಿಚಾರದಲ್ಲೂ ತಾರತಮ್ಯ ಮಾಡ್ತಿದ್ದಾರೆಂದು ಮಾತಿನ ಚಕಮಕಿ ನಡೆಸಿದ್ದಾರೆ. ತಾಯಿ ಚಾಮುಂಡೇಶ್ವರಿ ದರ್ಶನ ಸಿಗದೆ ಅಸಮಧಾನಗೊಂಡಿದ್ದ ಎಲ್ಲರೂ ಪೋಲೀಸರ ವಿರುದ್ಧ ಗಲಾಟೆ ನಡೆಸಿದ್ದಾರೆ.

ನಮಗೆ ಅವಕಾಶ ನೀಡಿಲ್ಲ, ಹೀಗಿರುವಾಗ ಶೋಭಾ ಕರಂದ್ಲಾಜೆ, ದರ್ಶನ್ ಅವರಿಗೆ ಹೇಗೆ ಚಾಮುಂಡಿ ಬೆಟ್ಟ ಪ್ರವೇಶಿಸಲು ಅವಕಾಶ ನೀಡಿದ್ರಿ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗ್ಯಾಕೆ ಈ ತಾರತಮ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top