fbpx
ಸಮಾಚಾರ

ಹಿಂದಿ ಗೊತ್ತಿಲ್ಲದ ಕಾರಣಕ್ಕೆ ವಂದೇ ಭಾರತ್ ಫ್ಲೈಟ್‌ನಲ್ಲಿ ಕನ್ನಡಿಗರಿಗೆ ಅವಕಾಶ ನೀಡದ ಭಾರತೀಯ ರಾಯಭಾರ ಕಚೇರಿ; ಖಂಡಿಸಿ ಪ್ರಧಾನಿಗೆ ಪತ್ರ ಬರೆದ ಜಿಸಿ ಚಂದ್ರಶೇಖರ್

ಕೊರೋನಾ ವೈರಸ್ ಪರಿಣಾಮದಿಂದಾಗಿ ಹಲವು ದೇಶಗಳು ಲಾಕ್’ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಈ ನಿಯಮಗಳಿಂದಾಗಿ ಹೊರ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರು ಭಾರತಕ್ಕೆ ಬರಲು ಸಮಸ್ಯೆಯಾಗುತ್ತಿದೆ. ಅಲ್ಲಿರಲಾಗದೆ, ಇಲ್ಲಿಗೆ ಬರಲು ಅವಕಾಶವಿಲ್ಲದೆ ಅತಂತ್ರರಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಆದರೆ ಹಿಂದಿ ಗೊತ್ತಿಲ್ಲ ಎಂಬ ಕಾರಣಕ್ಕೆ ವಿದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ತಾರತಮ್ಯ ನಡೆಸಲಾಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ಮುಂಜಾನೆ 4.15 ಕ್ಕೆ ಚಾರ್ಟರ್ಡ್ ವಿಮಾನದಲ್ಲಿ ಬೆಂಗಳೂರಿಗೆ ಇಳಿಯುತ್ತಿದ್ದಂತೆ ರಷ್ಯಾದ ಮಾಸ್ಕೋದಲ್ಲಿ ಸಿಕ್ಕಿಹಾಕಿಕೊಂಡಿದ್ದ ಕರ್ನಾಟಕದ ಒಟ್ಟು 209 ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

 

ನಾವು ಕನ್ನಡಿಗರು,ಹಿಂದಿ ಗೊತ್ತಿಲ್ಲ ಎನ್ನುವ ಒಂದೇ ಕಾರಣಕ್ಕೆ ವಂದೇ ಭಾರತ್ ಫ್ಲೈಟ್ ನಲ್ಲಿ ಅವಕಾಶ ಕೊಡದೆ ಇರುವುದನ್ನು ಖಂಡಿಸುತ್ತಾ.. ನಾವು…

GC Chandrashekhar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜುಲೈ 16, 2020

 

ಮಾರ್ಚ್ 23 ರಂದು ರಷ್ಯಾದಲ್ಲಿ ಕೋವಿಡ್ ಪ್ರೇರಿತ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ವೈದ್ಯಕೀಯ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬರಲು ವಿಮಾನ ಪಡೆಯಲು ಪ್ರಯತ್ನಿಸುತ್ತಿದ್ದರು. ದೆಹಲಿ, ಗುಜರಾತ್, ಮುಂಬೈ ಮತ್ತು ಕೇರಳದಂತಹ ಹಲವಾರು ರಾಜ್ಯಗಳಿಗೆ ಸ್ಥಳಾಂತರಿಸುವ ವಿಮಾನಗಳು ಇದ್ದರೂ, ಬೆಂಗಳೂರಿಗೆ ಒಂದೇ ಒಂದು ವಿಮಾನವಿತ್ತು, ಅದು ಕೂಡ ದೆಹಲಿಗೆ ತಲುಪಿಯಾದ ನಂತರ ಬೆಂಗಳೂರಿಗೆ ಬರುವುದಿತ್ತು.

ನಂತರ ಕನ್ನಡಿಗ ನಾಗರಿಕರನ್ನು ಕರೆತರುವ ವಾಪಸಾತಿ ವಿಮಾನಗಳನ್ನು ಹೊಂದಿದ್ದ ವಂದೇ ಭಾರತ್ ಮಿಷನ್ ರಷ್ಯಾದಿಂದ ಒಂದು ವಿಮಾನವನ್ನು ಕೂಡ ವ್ಯವಸ್ಥೆ ಮಾಡಲಿಲ್ಲ. ನಂತರ ರಾಯಭಾರ ಕಚೇರಿಯ ಯಾವುದೇ ಸಹಾಯವಿಲ್ಲದೆ, ವಿದ್ಯಾರ್ಥಿಗಳು ಹಲವಾರು ವೀಡಿಯೊಗಳನ್ನು ಮಾಡಿ ಅವುಗಳನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದರು. ನಂತರ ವಿದ್ಯಾರ್ಥಿಗಳು ಸಹಾಯಕ್ಕಾಗಿ ಸಂಸದ ಜಿ ಸಿ ಚಂದ್ರಶೇಖರ್ ಅವರ ಬಳಿ ಮನವಿ ಮಾಡಿಕೊಂಡರು.

ಆ ಮಕ್ಕಳ ಸಂಕಷ್ಟಕ್ಕೆ ಜಿಸಿ ಚಂದ್ರಶೇಖರ್ ಮಿಡಿದಿದ್ದು ಸಾಕಷ್ಟು ಮಂದಿಯನ್ನು ವಿದೇಶಗಳಿಂದ ಕರ್ನಾಟಕಕ್ಕೆ ಕರೆತರುವ ಕೆಲಸ ಮಾಡಿದ್ದಾರೆ. ಈ ಉದ್ದೇಶಕ್ಕಾಗಿ ಅವರು ವಿದೇಶಾಂಗ ಸಚಿವಾಲಯ, ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು. ಜಿಸಿ ಚಂದ್ರಶೇಖರ್ ಅವರ ಪ್ರಯತ್ನದ ಫಲವಾಗಿ ಮಂಗಳವಾರ, 217 ರಷ್ಯಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದಿಳಿದರು ಮತ್ತು ಈಗ ಕ್ವಾರಂಟೈನ್ ನಲ್ಲಿ ಇದ್ದಾರೆ.

 

 

“ರಷ್ಯಾದಲ್ಲಿ ಕರ್ನಾಟಕದ ಸುಮಾರು 400 ವಿದ್ಯಾರ್ಥಿಗಳು ಸಿಲುಕಿದ್ದರು. ಆದರೆ ನಾವು ಭಾರತೀಯ ರಾಯಭಾರ ಕಚೇರಿ ನಮಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ನಮಗೆ ಹಿಂದಿ ತಿಳಿಯದ ಕಾರಣಕ್ಕೆ ಅವರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರು” ಎಂದು ರಷ್ಯಾದಿಂದ ವಾಪಸ್ಸಾಗಿರುವ ವಿದ್ಯಾರ್ಥಿಗಳಲ್ಲಿ ಒಬ್ಬರು ಹೇಳಿದ್ದಾರೆ.

ಕರ್ನಾಟಕದ 400 ವಿದ್ಯಾರ್ಥಿಗಳನ್ನು ಹಿಂದಿ ತಿಳಿಯದ ಕಾರಣ ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಟ್ಟದಾಗಿ ನಡೆಸಿಕೊಂಡ ವಿಚಾರವಾಗಿ ಹಿಂದಿ ಗೊತ್ತಿಲ್ಲ ಎನ್ನುವ ಒಂದೇ ಕಾರಣಕ್ಕೆ ವಂದೇ ಭಾರತ್ ಫ್ಲೈಟ್ ನಲ್ಲಿ ಅವಕಾಶ ಕೊಡದೆ ಇರುವುದನ್ನು ಖಂಡಿಸುತ್ತಾ ಸಂಸದ ಜಿಸಿ ಚಂದ್ರಶೇಖರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top