fbpx
ಸಮಾಚಾರ

ಪೊಲೀಸ್ ಇಲಾಖೆಯಲ್ಲಿ ಕೊರೋನಾ ವಾರಿಯರ್ ಆದ ಪುಟ್ಟಗೌರಿ: ಸಿವಿಲ್ ಪೊಲೀಸ್ ವಾರ್ಡನ್ ನಟಿ ರಂಜನಿ ರಾಘವನ್

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಜನಿ ರಾಘವನ್ ಕೊರೋನಾ ವಿರುದ್ಧ ಹೊರಾಡಲು ಬೆಂಗಳೂರು ಪೊಲೀಸರ ಜೊತೆ ಸಿವಿಲ್ ವಾರ್ಡ್‌ ಆಗಿ ಕೈ ಜೋಡಿಸಿದ್ದಾರೆ. ಪೊಲೀಸ್ ಸಿಬ್ಬಂದಿಗೆ ನಟಿ ರಂಜಿನಿ ಅವರು ಸಹಕಾರವನ್ನು ನೀಡುತ್ತಿದ್ದಾರೆ.

ಸಿವಿಲ್ ಪೊಲೀಸ್ ವಾರ್ಡ್‌:
ಈ ಬಗ್ಗೆ ರಜನಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ನಿಮಗೆಲ್ಲಾ ತಿಳಿದಿರುವ ಹಾಗೆ ಬೆಂಗಳೂರಿನಲ್ಲಿ ಕೋವಿಡ್‌19 ಕೇಸ್‌ಗಳು ಹೆಚ್ಚಾಗುತ್ತಲೇ ಇದೆ. ಎಲ್ಲರಿಗೂ ಇದೊಂದು ಕಷ್ಟದ ಸಮಯವೇ ಹೌದು. ಅದರಲ್ಲೂ ಪೊಲೀಸರಿಗೆ ಇನ್ನು ಹೆಚ್ಚಿನ ಕಷ್ಟ. ಪೊಲೀಸರಿಗೆ ಸಹಾಯ ಮಾಡಲು ನಮಗೊಂದು ಅವಕಾಶ. ಕೆಲವು ದಿನಗಳ ಹಿಂದೆ ಬೆಂಗಳೂರು ಸಿವಿಲ್ ವಾರ್ಡನ್‌ ಆಗಿ ಸೇವೆ ಮಾಡುವುದಕ್ಕೆ ಕರೆ ನೀಡಿದ್ದರು. ನಾನು ಈಗ ವಾರ್ಡನ್‌ ಆಗಿ ಕಾರ್ಯವಹಿಸುತ್ತಿದ್ದೇನೆ. ಸ್ವಯಂಸೇವಕರಾಗಿ ನೀವು ಸೇರುವಂತೆ ಸೂಚಿಸುತ್ತೇನೆ. ಇದರಿಂದ ಒಟ್ಟಾಗಿ ಮಹಾಮಾರಿ ವಿರುದ್ಧ ಹೋರಾಡಲು ಸುಲಭವಾಗುತ್ತದೆ’ ಎಂದಿದ್ದಾರೆ.

 

View this post on Instagram

Hello all! We all know that COVID cases are rapidly increasing in Bengaluru. It has been a very difficult phase for everyone including the police department. Bengaluru Police has invited residents to volunteer for Civil Police Warden to combat COVID. And I am also serving as a Civil Police Warden. I would suggest youths who are physically fit and willing to volunteer to apply for the same ASAP. log on to http://bcp.gov.in 😊 I’ll try to update more about this. Stay safe ❤️ ನಮಸ್ಕಾರ. ನಿಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಕೋವಿಡ್ ಕೇಸಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಕರೋನಾ ನಿಯಂತ್ರಣ ಹಾಗೂ ಕರೋನಾ ನಿಯಮಗಳನ್ನು ಜಾರಿಗೊಳಿಸುವುದು ಸರಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೂ ಅತಿ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಸದ್ಯ ಪೊಲೀಸರಿಗೆ ಜನರ ಸೇವೆಯ ಅವಶ್ಯಕತೆ ಇದ್ದು, ಬೆಂಗಳೂರಿನ ನಿವಾಸಿಗಳನ್ನು ಸಿವಿಲ್ ಪೊಲೀಸ್ ವಾರ್ಡನ್ ಆಗಿ ಸೇವೆಮಾಡುವಂತೆ ಕರೆ ನೀಡಿದ್ದಾರೆ. ನಾನು ಕೂಡ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೆ, ಸದೃಢ ಹಾಗೂ ಸೇವಾ ಮನಸ್ಸಿನ ಯುವಜನತೆಯನ್ನು ಸ್ವಯಂಸೇವಕರಾಗಿ ಈ ಕಾರ್ಯದಲ್ಲಿ ಸೇರುವಂತೆ ಸೂಚಿಸುತ್ತೇನೆ. 😊 @bhaskarrao @bengalurucitypolice #bangalorecitypolice #civilpolicewarden #covidwarriors

A post shared by ರಂಜನಿ ರಾಘವನ್ (@ranjani.raghavan) on

 

ನಗರದಾದ್ಯಂತ ನೂರಾರು ಪೊಲೀಸ್ ಸಿಬ್ಬಂದಿಗೇ ಕೊರೊನಾ ಸೋಂಕು ತಗುಲಿದ್ದು, ಹಲವಾರು ಪೊಲೀಸ್ ಠಾಣೆಗಳೂ ಸಹ ಸೀಲ್​ಡೌನ್ ಆಗಿವೆ. ಹೀಗಾಗಿಯೇ ನಗರದಾದ್ಯಂತ ಕಾನೂನು ಸುವ್ಯವಸ್ಥೆಯ ಜತೆಗೆ ಲಾಕ್​​ಡೌನ್ ಅನ್ನೂ ಕಟ್ಟುನಿಟ್ಟಾಗಿ ಪಾಲಿಸುವುದು ನಗರ ಪೊಲೀಸರಿಗೆ ಕಷ್ಟಸಾಧ್ಯ. ಇದೇ ನಿಟ್ಟಿನಲ್ಲಿ ಲಾಕ್​​ಡೌನ್​ಗೂ ಮುನ್ನವೇ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಸ್ವಯಂಸೇವಕರಾಗಲು ಆಸಕ್ತ ಯುವಕ ಯುವತಿಯರಿಗೆ ಮುಂದಾಗಲು ಕರೆ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top