fbpx
ಸಮಾಚಾರ

ಹೃದಯಾಘಾತದಿಂದ ಜೂ. ರಣಬೀರ್ ಕಪೂರ್ ನಿಧನ

ಬಾಲಿವುಡ್ ನಟ ರಣಬೀರ್ ಕಪೂರ್ ಅವರ ತದ್ರೂಪಿ, ಜೂನಿಯರ್ ರಣಬೀರ್ ಕಪೂರ್ ಎಂದೇ ಫೇಮಸ್ ಆಗಿದ್ದ ಜುನೈದ್ ಷಾ ನಿಧನಗೊಂಡಿದ್ದಾರೆ. ಕಾಶ್ಮೀರದ ನಿವಾಸಿಯಾಗಿರುವ ಜುನೈದ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಶ್ರೀನಗರದ ಎಲ್ಲಹಿ ಬಾಗ್ನಲ್ಲಿ ಗುರುವಾರ ರಾತ್ರಿ ಕೊನೆಯುಸಿರೆಳೆದರು.

ಕೆಲವು ವರ್ಷಗಳ ಹಿಂದೆ ಮಾಡೆಲ್ ಜುನೈದ್ ಷಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಜುನೈದ್ ಅವರ ಮುಖ ಚಹರೆ ಥೇಟ್ ಬಾಲಿವುಡ್ ನಟ ರಣಬೀರ್ ಸಿಂಗ್ ಅವರಿಗೆ ಹೋಲಿಕೆಯಾಗಿರುವದರಿಂದ ಅವರು ಶೀಘ್ರವಾಗಿ ವೈರಲ್ ಆಗಿ ಬೇಗನೆ ಜನಪ್ರಿಯತೆ ಗಳಿಸಿದರು.

 

 


ಎಷ್ಟರ ಮಟ್ಟಿಗೆ ಎಂದರೆ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಅವರು ಕೂಡ ಜುನೈದ್ ಬಗ್ಗೆ ಟ್ವೀಟ್ ಮಾಡಿ ಇಬ್ಬರ ನಡುವೆ ವ್ಯತ್ಯಾಸ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಒಮ್ಮೆ ಜುನೈದ್ ಅವರ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದ ರಿಷಿ ಕಪೂರ್ “ಓಹ್ ದೇವರೇ, ನನ್ನ ಸ್ವಂತ ಮಗನ ರೀತಿಯೇ ಮತ್ತೊಬ್ಬ ಇದ್ದಾನೆ!!! ಪ್ರಾಮಿಸ್ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ. ಉತ್ತಮ ಡಬಲ್” ಎಂದು ಹೇಳಿದ್ದರು.

ಅಂದಹಾಗೆ ವೃತ್ತಿಪರ ಮಾಡೆಲ್ ಆಗಿರುವ ಜುನೈದ್ ಕೆಲವು ಚಿತ್ರಗಳಲ್ಲಿ ಕೂಡ ನಟಿಸಿದ್ದರು. ಮುಂದೆ ಒಳ್ಳೊಳ್ಳೆ ಚಿತ್ರಗಳಲ್ಲಿ ಅಭಿನಯಿಸುವ ಕನಸು ಕಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top