fbpx
ಸಮಾಚಾರ

ಕಾಗೆ ಹಾರಿಸಿದ್ದ ‘ಡ್ರೋನ್ ಪ್ರತಾಪ್’ ವಿರುದ್ಧ ದೂರು ದಾಖಲು!

ಡ್ರೋಣ್ ಪ್ರತಾಪ್ ವಿರುದ್ಧ ದೂರು ದಾಖಲಾಗಿದೆ. ಸುಳ್ಳು ಹೇಳಿಕೊಂಡು ತಿರುಗಾಡಿದ್ದು ಚಂದಾ ಹಣ ಪಡೆದು ಜನರಿಗೆ ವಂಚನೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ​​ ಪ್ರತಾಪ್ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​​ಗೆ ದೂರು ನೀಡಿದ್ದಾರೆ. ಜೇಕಬ್ ಜಾರ್ಜ್​​ ದೂರು ನೀಡಿರುವ ವ್ಯಕ್ತಿ.

ಮಂಡ್ಯ ಮೂಲದ ಯುವಕ ಪ್ರತಾಪ್, ತಾನು ಡ್ರೋಣ್ ತಂತ್ರಜ್ಞಾನದ ಸಂಶೋಧಕ, ಹೊಸ ಆವಿಷ್ಕರದಲ್ಲಿ ತೊಡಗಿದ್ದೇನೆ. ಹತ್ತಾರು ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ, ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತನಾಗಿದ್ದೇನೆ ಎಂದೆಲ್ಲಾ ಸುಳ್ಳು ಹೇಳಿಕೊಂಡು ಹಲವು ಗಣ್ಯರು, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಹಣ ಪಡೆದಿರುವ ಮಾಹಿತಿ ಇದೆ ಎಂದು ದೂರಿನಲ್ಲಿ ಜಾರ್ಜ್ ಉಲ್ಲೇಖಿಸಿದ್ದಾರೆ.

‘ಬೇರೆ ಬೇರೆ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳ ಎದುರು ಭಾಷಣ ಮಾಡಿ ತಪ್ಪು ಸಂದೇಶ ರವಾನಿಸಿದ್ದಾನೆ. ಸದ್ಯ ರಾಜ್ಯದಲ್ಲಿ ಸಾಕಷ್ಟು ವಿಜ್ಞಾನಿಗಳಿದ್ದಾರೆ. ಅವರೆಲ್ಲ ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ಪ್ರತಾಪ್ ತೆಗೆದುಕೊಂಡಿರುವ ಹಣವನ್ನು ವಸೂಲಿ ಮಾಡಿ, ನೈಜ ವಿಜ್ಞಾನಿಗಳಿಗೆ ಕೊಡಿಸಬೇಕು’ ಎಂದೂ ಅವರು ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top