fbpx
ಸಮಾಚಾರ

ಕೊರೊನಾ ಸೋಂಕಿಗೆ ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ ನಿಧನ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಹುಲಿವಾನ್ ಗಂಗಾಧರಯ್ಯ (70) ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೊರೋನಾ ಸೋಂಕಿನಿಂದಾಗಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಿತ್ರೀಕರಣದ ಸಂದರ್ಭದಲ್ಲಿ ಇವರಿಗೆ ಜ್ವರ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಕೊರೊನಾ ಸೋಂಕು ದೃಢವಾದ ಮೇಲೆ ಗಂಗಾಧರ್ ಖಿನ್ನತೆಗೆ ಒಳಗಾಗಿದ್ದು, ಮಕ್ಕಳ ಜೊತೆ ಮಾತನಾಡುವುದನ್ನ ಬಿಟ್ಟಿದ್ದರು ಎನ್ನಲಾಗಿದೆ.

ಗಂಗಾಧರಯ್ಯ ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಗಂಗಾಧರ್​, ಉಲ್ಟಾ ಪಲ್ಟಾ, ಗ್ರಾಮ ದೇವತೆ, ಭೂಮಿ ತಾಯಿ ಚೊಚ್ಚಲ ಮಗ, ಅಪ್ಪು, ಕುರಿಗಳು ಸಾರ್ ಕುರಿಗಳು, ಶಬ್ಧವೇದಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top