fbpx
ಸಮಾಚಾರ

ಹೋಮ್ ಕ್ವಾರಂಟೈನ್ ನಲ್ಲಿದ್ದ ಪ್ರತಾಪನನ್ನು TRP ಹುಚ್ಚಿಗಾಗಿ ಸ್ಟುಡಿಯೋಗೆ ಕರ್ಕೊಂಡ್ ಬಂದ ಕಿರಿಕ್ ಕೀರ್ತಿಗೆ ಬೇಸಿಕ್ ಕಾಮನ್ ಸೆನ್ಸ್ ಕೂಡ ಇಲ್ವಾ?

ವಿಶೇಷ ಡ್ರೋನ್ ತಯಾರಿಸಿದ್ದಾಗಿ ಸುಳ್ಳು ಹೇಳಿಕೊಂಡು ಓಡಾಡಿದ್ದ ಪ್ರತಾಪ್ ಈಗ ಎಲ್ಲರ ಮುಂದೆ ಬೆತ್ತಲಾಗಿದ್ದಾನೆ. ಪ್ರತಾಪನ ‘ಸಾಹಸ’ ಕಂಡು ಯಾರೆಲ್ಲಾ ಈತನನ್ನು ಹೊಗಳಿ ಹಟ್ಟಕ್ಕೇರಿಸಿದ್ದರೋ ಅವರೇ ಇದೀಗ ಛೀಮಾರಿ ಹಾಕುವಂಥ ಪರಿಸ್ಥಿತಿ ಎದುರಿಸುತ್ತಿರುವಾಗಲೇ ಆತ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾನೆ.

ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟೀಕರಣ ನೀಡಲು ಪ್ರತಾಪ್‌ ಜುಲೈ 16ರಂದು ಮನೆಯಿಂದ ಹೊರಗೆ ಹೋಗಿ, ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಟಿ.ವಿ ವಾಹಿನಿಗಳ ಚರ್ಚೆ ಮತ್ತು ಸಂದರ್ಶನದಲ್ಲಿ ಭಾಗವಹಿಸಿದ್ದರು. ಜುಲೈ 15ರಂದು ಹೈದರಬಾದ್‌ನಿಂದ ಹಿಂದಿರುಗಿದ್ದ ಪ್ರತಾಪ್‌ ಮರುದಿನವೇ (ಜುಲೈ 16) ಸುದ್ದಿ ವಾಹಿನಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಇದು ಕ್ವಾರಂಟೈನ್ ನಿಯಮದ ಉಲ್ಲಂಘನೆಯಾಗಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದ ಪ್ರತಾಪ್‌ ನಿಯಮಾನುಸಾರ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಿತ್ತು. ಆದರೆ ನಿಯಮವನ್ನು ಉಲ್ಲಂಘಿಸಿ ಖಾಸಗಿ ಚಾನೆಲ್‌ಗೆ (BTV) ಸಂದರ್ಶನ ನೀಡಲು ಹೋಗಿದ್ದಾನೆ. ಅಷ್ಟೇ ಅಲ್ಲದೆ ಕ್ವಾರಂಟೈನ್‌ಗೆ ಒಳಗಾಗಿರುವ ವ್ಯಕ್ತಿ ಸದಾ ಮೊಬೈಲ್‌ನ್ನು ತನ್ನ ಬಳಿಯೇ ಇಟ್ಟುಕೊಳ್ಳಬೇಕು. ಆದರೆ ಆತ ತನ್ನ ಫೋನನ್ನು ಸ್ವಿಚ್ ಮಾಡಿಕೊಂಡಿದ್ದಾನೆ ಪೊಲೀಸರು ಹುಡುಕಲು ಬಂದಾಗ ಕ್ವಾರಂಟೈನ್‌ ಜಾಗದಲ್ಲಿ ಇಲ್ಲದಿದ್ದ ಪ್ರತಾಪ್‌ ಮೊಬೈಲ್‌ ಅನ್ನು ಬೇರೆಯವರ ಕೈಗೆ ಕೊಟ್ಟು ಹೋಗಿದ್ದಾನೆ.

ಪ್ರತಾಪ್ ಹೋಂ ಕ್ವಾರಂಟೇನ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಂಪ್ಲೆಂಟ್ ದಾಖಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೋಂಕಿತ ವ್ಯಕ್ತಿಯೊಬ್ಬರ ಪ್ರಾಥಮಿಕ ಸಂಪರ್ಕಿತನಾಗಿದ್ದ ಡ್ರೋನ್ ಪ್ರತಾಪ್ ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರತಾಪ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

Basic sense ಕೂಡಾ ಇಲ್ಲದ ಕಿರಿಕ್ ಕೀರ್ತಿ:
ಲಾಕ್ ಡೌನ್ ಸಮಯದಲ್ಲಿ ನಾಗರೀಕರು ದಿನಸಿಗಾಗೋ ಅಥವಾ ಅಗತ್ಯ ವಸ್ತುಗಳ ಖರೀದಿಗೆ ಅನಿವಾರ್ಯವಾಗಿ ಹೊರಗಡೆ ಬಂದಾಗ ಟಿವಿ ಪರದೆ ಮುಂದೆ ಕೂತು “ಜನರಿಗೆ ಜವಾಬ್ದಾರಿ ಇಲ್ಲ, ಬೇಜವಾಬ್ದಾರಿ ಜನಗಳು ಇವರು, ಇವರಿಗೆ ಮಿಲಟರಿ ಪೊಲೀಸರನ್ನು ಕರೆತಂದು ಬುದ್ದಿ ಕಲಿಸಬೇಕು” ಅಂತ ಲಬೋ ಎಂದು ಬಾಯಿ ಬಡಿದುಕೊಳ್ಳುತ್ತಿದ್ದ ವಾರ್ತಾ ವಾಚಕ ಕಿರಿಕ್ ಕೀರ್ತಿ ಈಗ ಸ್ವತಃ ತಾನೇ ಬೇಜವಾಬ್ದಾರಿ ಪ್ರದರ್ಶಿಸಿರುವುದು ಪ್ರಜ್ಞಾವಂತ ವೀಕ್ಷಕರಿಗೆ ಅಚ್ಚರಿ ತಂದಿದೆ.

ಚರ್ಚೆಯಲ್ಲಿದ್ದ ವೇಳೆಯೇ ಪ್ರತಾಪ್‌ ತಾನು ವಾಹಿನಿಗೆ ಬರಲು ಕ್ವಾರಂಟೈನ್‌ ನಿಯಮಗಳನ್ನು ಮುರಿದಿರುವುದಾಗಿ ಯಾವುದೇ ಅಂಜಿಕೆ ಇಲ್ಲದೇ ಹೇಳಿಕೊಂಡಿದ್ದ. ಮಾತ್ರವಲ್ಲದೇ ವಾಹಿನಿಯಲ್ಲಿಯೇ ತನ್ನ ಕೈಗೆ ಹಾಕಿರುವ ಸೀಲ್‌ಗಳನ್ನು ತೋರಿಸಿ ತಾನು ಹೋಂ ಕ್ವಾರಂಟೈನ್‌ನಲ್ಲಿ ಇದ್ದರೂ ಇಲ್ಲಿ ಬಂದಿರುವುದಾಗಿ ಹೇಳಿದ್ದ. ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರತಾಪ್‌, ಹೋಂ ಕ್ವಾರಂಟೈನ್‌ ಮುದ್ರೆ ಸ್ಪಷ್ಟವಾಗಿ ವೀಕ್ಷಕರಿಗೂ ಕಾಣಿಸುತ್ತಿತ್ತು ಆದರೆ ಇದು ಪಕ್ಕದಲ್ಲೇ ಕೂತಿದ್ದ ಕಿರಿಕ್ ಕೀರ್ತಿಗೆ ಕಾಣಿಸಲಿಲ್ಲವೇ? ಅಥವಾ ಕಂಡರೂ ಬೇಜವಾಬ್ದರಿತನ ಪ್ರದರ್ಶಿಸಿದರೇ? ಸರ್ಕಾರದ ರೂಲ್ಸ್ ಗಳು ಕೀರ್ತಿಗೆ ಅನ್ವಯಿಸುವುದಿಲ್ಲ ಅನಿಸುತ್ತದೆ. ಈ ಮೂಲಕ ಮೂಲಕ ಕಿರಿಕ್ ಕೀರ್ತಿ ಕ್ವಾರಂಟೈನ್‌ ನಿಯಮಗಳನ್ನು ಅಣಕ ಮಾಡಿದ್ದಾರೆ ಅನಿಸುತ್ತದೆ.

ಊರಿಗೆಲ್ಲಾ ಬುದ್ದಿ ಹೇಳುವ ಖಡಕ್ ವಾಚಕ ಕಿರಿಕ್ ಕೀರ್ತಿಗೆ ಕೂಡ ಬೇಸಿಕ್ ಸೆನ್ಸ್ ಇಲ್ಲದೆ ಹೋಯಿತೇ?
ಕೊರೋನಾ ಸೋಂಕಿತನ ಜೊತೆ ಪ್ರಾರ್ಥಮಿಕ ಸಂಪರ್ಕ ಹೊಂದಿರುವ ಮತ್ತು ಹೋಮ್ ಕ್ವಾರಂಟೈನ್ ನಲ್ಲಿ ಇದ್ದ ಪ್ರತಾಪನನ್ನು ಚರ್ಚೆಗೆ ಕರೆಯುವ ಅರ್ಜೆಂಟ್ ಏನಿತ್ತು? ಇದೇನಾ ನಿಮ್ಮ ಜನಪರ ಕಾಳಜಿ ಜನರ ಆರೋಗ್ಯಕ್ಕಿಂತ ನಿಮ್ಮ TRP ಬೇಳೆ ಬೇಯಿಸಿಕೊಳ್ಳುವುದೇ ಮುಖ್ಯವಾಯಿತೇ? ಒಂದು ವೇಳೆ ಕರೋನ ಪಾಸಿಟಿವ್ ಬಂದರೇ BTVಯಲ್ಲಿ ಕೆಲಸ ಮಾಡುವವರಿಗೂ ಕೊರೋನಾ ಭೀತಿ ಎದುರಾಗುತ್ತದೆ. ಇದಕ್ಕೆ ಯಾರು ಜವಾಬ್ದಾರಿ? ಆಗ ಇಡೀ BTV sealdown ಮಾಡ್ತಾರಾ?

ಎರಡು ತಿಂಗಳ ಹಿಂದೆ ಸಿಲ್ ಇರುವನನ್ನು ಅಮಾಯಕವಾಗಿ ಹೊಡೆಯುವುದನ್ನು ತೋರಿಸಿದ ನೀವುಗಳು ಈಗ ಅದೇಗೆ ಕೈ ಮೇಲೆ ಕ್ವಾರಂಟೈನ್ ಸೀಲ್ ಇದ್ದವನನ್ನು panel ಗೇ ಕರೆದುಕೊಂಡು ಬಂದಿರಿ? ಇದರಿಂದ ಜನಕ್ಕೆ ನೀವು ಯಾವ ಸಂದೇಶ ನೀಡಲು ಹೊರಟಿದ್ದೀರಿ? ಸರ್ಕಾರದ ರೂಲ್ಸಗಳನ್ಙೆ ಸರಿಯಾಗಿ ನೀವೆ ಪಾಲೋ ಮಾಡಲ್ಲಾ ಇನ್ನೂ ಜನಸಾಮಾನ್ಯರಿಗೆ ಹೇಳುವ ನೈತಿಕತೆ ಏನಿದೆ?

ಒಂದು ವೇಳೆ ಹೈದರಾಬಾದ್‌ನಿಂದ ಪ್ರತಾಪ್‌ ಏನಾದರೂ ಕರೊನಾ ಸೋಂಕು ಅಂಟಿಸಿಕೊಂಡು ಬಂದಿದ್ದು, ಪಾಸಿಟಿವ್‌ ಎಂದು ಬಂದರೆ ಸಂದರ್ಶನ ನೀಡಿರುವ ಟಿ.ವಿ.ಚಾನೆಲ್‌ನ ಎಲ್ಲಾ ಸಿಬ್ಬಂದಿಯನ್ನೂ ಕ್ವಾರಂಟೈನ್‌ ಮಾಡಬೇಕಾಗುತ್ತದೆ. ವಾಹಿನಿಗಳ ಚರ್ಚೆಯಲ್ಲಿ ಕುಳಿತಿದ್ದ ಪ್ರತಿಯೊಬ್ಬರೂ ಪ್ರಾಥಮಿಕ ಸೋಂಕು ಸಂಪರ್ಕಿತರಾಗುತ್ತಾರೆ ಎನ್ನುವುದು ಕೀರ್ತಿ ಅರಿವಿಗೆ ಬರಲಿಲ್ಲವೇ? TRP ಹುಚ್ಚಿಗಾಗಿ ಅಷ್ಟೊಂದು ಜನರ ಪ್ರಾಣವನ್ನು ಪಣಕ್ಕಿಡುವುದು ಎಷ್ಟು ಸರಿ? ಎಂಬುದು ಜನಸಾಮಾನ್ಯರಿಗೆ ಇರುವ ಪ್ರಶ್ನೆಗಳು.

ತಮ್ಮ ಅರಿವಿಗೆ ಬಾರದೇ ಇದು ನಡೆದುಹೋಯಿತು ಎಂದಿಟ್ಟುಕೊಂಡರೂ “ಇದು ಜನತೆಯಲ್ಲಿ ತಪ್ಪು ಸಂದೇಶ ರವಾನಿಸುತ್ತದೆ” ಎಂಬ ಸಲುವಾಗಿಯಾದರೂ ಕನಿಷ್ಠಪಕ್ಷ ಕ್ಷಮೆಯಾಚಿಸಬಹುದಿತ್ತುಆದರೆ ತೀವ್ರವಾಗಿ ಜನಪರ ಕಾಳಜಿ ಹೊಂದಿರುವ ಕೀರ್ತಿ ಅದನ್ನು ಮಾಡಿಲ್ಲ ಎಂಬುದೇ ಬೇಸರದ ಸಂಗತಿ. ಹೋಮ್ ಕ್ವಾರಂಟೈನ್ ನಲ್ಲಿ ಇದ್ದ ಪ್ರತಾಪನನ್ನು ಚರ್ಚಾ ಕಾರ್ಯಕ್ರಮಕ್ಕೆ ಕರೆತಂದು ಸಾರ್ವಜನಿಕ ಸಂಪರ್ಕ ಬೆಳೆಸಿರುವ ಮತ್ತು ಆ ಮೂಲಕ ಸರ್ಕಾರದ ಕ್ವಾರಂಟೈನ್ ನಿಯಮಗಳನ್ನು ಮುರಿದಿರುವ ಕಿರಿಕ್ ಕೀರ್ತಿ ಮತ್ತು ಬಿಟಿವಿ ವಾಹಿನಿ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಯೊಬ್ಬ ನಾಗರೀಕರ ಆಗ್ರಹವಾಗಿದೆ.

ಒಟ್ಟಿನಲ್ಲಿ ಬ್ರೇಕಿಂಗ್ ನ್ಯೂಸ್ ದಾಹಕ್ಕೆ ಬಿದ್ದಿರುವ ಸುದ್ದಿ ವಾಹಿನಿಗಳು ಯಾವುದೇ ಸಾಮಾಜಿಕ ಪಲ್ಲಟಗಳು ಜರುಗಿದಾಗಲೂ ತಮಗೆ ಬೇಕಾದ ರೀತಿಯಲ್ಲಿ ತಿರುಚಿ ಸತ್ಯಕ್ಕಿಂತ ಹಾರಿಕೆಯ ಸುದ್ದಿಯನ್ನೇ ಬಿತ್ತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ., ಸುದ್ದಿಬಾಕತನ ಹುಚ್ಚಿಗೆ ಬಿದ್ದಿರುವ ಇವರುಗಳು ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಿವೆ.. ಇನ್ನಾದರೂ ತಮ್ಮ ಕರ್ತವ್ಯ ನೆನೆದು ಸಮಾಜಕ್ಕೆ ಒಳ್ಳೆಯದಾಗುವ ಸಂದೇಶಗಳನ್ನ ನೀಡುವತ್ತ ನ್ಯೂಸ್ ಚಾನೆಲ್ಲುಗಳು ಗಮನಹರಿಸಬೇಕಿದೆ. ರಾಜಕೀಯ ಹಿತಾಸಕ್ತಿ, ಟಿಆರ್‌ಪಿ, ವ್ಯವಹಾರವನ್ನು ಮೀರಿ ಜನರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಕಡೆಗೂ ವಾಹಿನಿಗಳು ಗಮನಕೊಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top