fbpx
ಸಮಾಚಾರ

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೆ ಕೊರೊನಾ ಪಾಸಿಟಿವ್

ನಟ ಧ್ರುವ ಸರ್ಜಾ ದಂಪತಿಗಳಿಗೆ ಕೋವಿಡ್-19 ಸೋಂಕು ದೃಢವಾದ ನಂತರ ಇದೀಗ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಗೂ ಕೋವಿಡ್ -19 ಸೋಂಕು ತಾಗಿರುವುದು ದೃಢವಾಗಿದೆ. ಐಶ್ವರ್ಯಾ ತನಗೆ ಕೋವಿಡ್ 19 ಸೋಂಕು ತಾಗಿರುವ ಬಗ್ಗೆ ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.

 

 

“ನಾನು ಇತ್ತೀಚೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ಈಗ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ಅಲ್ಲದೇ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ” ಎಂದು ಕೊರೊನಾ ಇರುವ ಬಗ್ಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ “ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ. ಎಲ್ಲರೂ ಮನೆಯಲ್ಲಿಯೇ ಸುಕ್ಷಿತವಾಗಿರಿ. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಶ್ರೀಘದಲ್ಲೇ ನಾನು ಗುಣಮುಖವಾಗುತ್ತೇನೆ” ಎಂದು ಐಶ್ವರ್ಯಾ ಹೇಳಿದ್ದಾರೆ., ಅರ್ಜುನ್ ಸರ್ಜಾ ಕುಟುಂಬ ಸದ್ಯ ಚೆನ್ನೈನಲ್ಲಿ ವಾಸವಿದೆ. ಐಶ್ವರ್ಯಾ ಸರ್ಜಾ ಹೊರತುಪಡಿಸಿ ಅರ್ಜುನ್ ಸರ್ಜಾ, ಪತ್ನಿ ಆಶಾರಾಣಿ ಹಾಗೂ ಕಿರಿಯ ಪುತ್ರಿ ಅಂಜನಾ ಸರ್ಜಾಗೆ ನೆಗೆಟಿವ್ ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top