fbpx
ಸಮಾಚಾರ

“ಏನ್ ಮಾಡಿದರೂ ನಿನ್ನ ಉಳಿಸ್ಕೊಳಕ್ ಆಗ್ಲಿಲ್ಲ.. ಮಿಸ್ ಯು ಅಮ್ಮ” ಅಗಲಿದ ತಾಯಿಯ ಬಗ್ಗೆ ಜೋಗಿ ಪ್ರೇಮ್‌ ಭಾವುಕ ಮಾತು

ನಾನು ಎಷ್ಟೇ ಹೋರಾಟ ನಡೆಸಿದರು ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ನಟ, ನಿರ್ದೇಶಕ ಜೋಗಿ ಪ್ರೇಮ್ ಅಮ್ಮನ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

 

 

ನಟ ನಿರ್ದೇಶಕ ಪ್ರೇಮ್ ಅವರ ತಾಯಿ ಶುಕ್ರವಾರ ಸಾವನ್ನಪ್ಪಿದ್ದಾರೆ, ಹೀಗಾಗಿ ನಟ ಪ್ರೇಮ್ ತಮ್ಮ ತಾಯಿಯನ್ನು ಕಳೆದುಕೊಂಡ ದುಃಖವನ್ನು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ನಾನು ಎಷ್ಟೇ ಹೋರಾಟ ಮಾಡಿದರೂ ಕೊನೆಗೂ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಿನ್ನ ಋಣ ತೀರಿಸೋಕೆ ಮತ್ತೆ ನಿನ್ನ ಹೊಟ್ಟೆಯಲಿ ಹುಟ್ಟುವುದಕ್ಕೆ ನನಗೆ ಒಂದು ಅವಕಾಶ ಮಾಡಿಕೊಂಡು, ಯಾವತ್ತು ಕಾಯುತ್ತಿರುತ್ತೇನೆ. ಮಿಸ್ ಯು ಅಮ್ಮ ಎಂದು ಬರೆದುಕೊಂಡು ತಾಯಿ ಭಾಗ್ಯಮ್ಮ ಅವರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಭಾಗ್ಯಮ್ಮ ಅವರು ಕೆಲ ತಿಂಗಳಿನಿಂದ ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ್ ಅವರ ತಾಯಿ ಶುಕ್ರವಾರ ರಾತ್ರಿ (ಜುಲೈ 17) ಸುಮಾರು 9 ಗಂಟೆಗೆ ನಿಧನರಾಗಿದ್ದಾರೆ. ಭಾಗ್ಯಮ್ಮ ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top