fbpx
ಸಮಾಚಾರ

ಟ್ರೋಲಿಗರಿಗೆ ಆಹಾರವಾದ ಚಕ್ರವರ್ತಿ ಸೂಲಿಬೆಲೆ: ಟ್ವಿಟರ್‌ನಲ್ಲಿ #Heng_pung_lee ಟ್ರೆಂಡಿಂಗ್‌

ತಮ್ಮ ಏಕಮುಖ ಆಲೋಚನೆಗಳ ಮೂಲಕವೇ ಬೆಂಬಲಿಗರು ಮತ್ತು ವಿರೋಧಿಗಳನ್ನು ಸಮನಾಗಿ ಹೊಂದಿರುವ ಲೇಖಕ ಚಕ್ರವರ್ತಿ ಸೂಲಿಬೆಲೆ. 2014ರ ಲೋಕಸಭಾ ಚುನಾವಣೆಯಲ್ಲಿ ‘ಯುವಬ್ರಿಗೇಡ್’ ‘ನಮೋ ಬ್ರಿಗೇಡ್’ ಎಂಬ ಟೀಮ್ ಮೂಲಕ ಮೋದಿ ಪರವಾಗಿ ಪ್ರಚಾರ ಮಾಡಿದ್ದ ಸೂಲಿಬೆಲೆ 2019ರ ಲೋಕಸಭಾ ಚುನಾವಣೆಯಲ್ಲಿ ‘ಟೀಮ್ ಮೋದಿ’ ಎಂಬ ಮತ್ತೊಂದು ತಂಡದ ಮೂಲಕ ಪ್ರಧಾನಿ ಮೋದಿ ಪರವಾಗಿ ಪ್ರಚಾರ ಮಾಡಿದ್ದರು. ಇಂಥಾ ಚಕ್ರವರ್ತಿ ಸೂಲಿಬೆಲೆ ಟ್ವಿಟರ್‌ನಲ್ಲಿ ತೀವ್ರ ಟ್ರೋಲ್‌ ಆಗಿದ್ದಾರೆ. ಹೀಗಾಗಿ #Heng_pung_lee ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

 

 

ಚಕ್ರವರ್ತಿ ಸೂಲಿಬೆಲೆಯ ಈಗ ಟ್ರೋಲಿಗರಿಗೆ ಆಹಾರವಾಗಲು ಕಾರಣ ಅವರ ಹಳೆಯ ವಿಡಿಯೊಗಳೇ, ಅವರ ಭಾಷಣದ ಹಲವು ತುಣುಕುಗಳನ್ನು ಮುಂದಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಟ್ವಿಟರ್ ನಲ್ಲಿ #Heng_pung_lee ಮತ್ತು #ಹೆಂಗ್_ಪುಂಗ್_ಲೀ ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

 

 

ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ #Heng_pung_lee ಟಾಪ್‌ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿತು. ಇದರ ಜೊತೆಗೆ #ಹೆಂಗ್_ಪುಂಗ್_ಲೀ ಮತ್ತು #ಹೆಂಗ್_ಪುಂಗ್_ಲಿ ಹ್ಯಾಶ್‌ ಟ್ಯಾಗ್‌ಗಳು ಟ್ರೆಂಡ್‌ ಆದವು. ರಾತ್ರಿ ಹೊತ್ತಿಗೆ #Heng_pung_lee ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಟ್ವೀಟ್‌ ಮಾಡಿದ್ದರು. ತಮ್ಮ ಚರ್ಚೆಗಳನ್ನು ಚಕ್ರವರ್ತಿ ಸೂಲಿಬೆಲೆ ಅವರ ಅಧಿಕೃತ ಟ್ವಿಟರ್‌ ಖಾತೆ(@astitvam)ಗೆ ಟ್ಯಾಗ್‌ ಮಾಡಿದ ನೆಟ್ಟಿಗರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

 

 

ಈ ಮೊದಲು ಚಕ್ರವರ್ತಿ ಸೂಲಿಬೆಲೆ ಸಾಕಷ್ಟು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಅವರು ಭಾಷಣ ಮಾಡುವ ವೇಳೆ ಸಾಕಷ್ಟು ಉತ್ಪ್ರೇಕ್ಷೆಯುತವಾಗಿ ಮಾತನಾಡಿದ್ದರು, ಆದರೆ, ಆ ಭಾಷಣಗಳಲ್ಲಿ ಬಹುತೇಕ ಸತ್ಯವಿಲ್ಲ. ಹೀಗಾಗಿ, ಈ ವಿಚಾರ ಇಟ್ಟುಕೊಂಡೇ ಚಕ್ರವರ್ತಿ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

ಹೆಂಗ್​_ಪುಂಗ್_ಲೀ ಅಂದ್ರೆ ಅರ್ಥವೇನು?
ಪುಂಗೋದು ಎನ್ನುವುದು ಆಡು ಭಾಷೆಯಲ್ಲಿ ಸುಳ್ಳು ಹೇಳುವುದು ಎನ್ನುವ ಅರ್ಥವನ್ನು ನೀಡುತ್ತದೆ. ಹೀಗಾಗಿ, ಹೆಂಗ್​ ಪುಂಗ್​ ಲೀ ಎಂದ್ರೆ ಹೇಗೆ ಸುಳ್ಳು ಹೇಳಲಿ ಎನ್ನುವ ಅರ್ಥ ನೀಡುತ್ತದೆ. ಹೀಗಾಗಿ, ಈ ಮೊದಲಿನಿಂದಲೂ ಚಕ್ರವರ್ತಿ ಅವರ ವಿಡಿಯೋಗಳನ್ನು ಇದೇ ಹ್ಯಾಶ್​ಟ್ಯಾಗ್​ ಮೂಲಕ ಹಾಕಲಾಗುತ್ತಿದೆಯಾದರೂ ಟ್ರೆಂಡ್​ ಆಗಿರಲಿಲ್ಲ.

 

 

 

ಒಟ್ಟಿನಲ್ಲಿ ಡ್ರೋನ್‌ ಪ್ರತಾಪ್ ಹಗರಣ ಬಯಲಾದ ನಂತರ ಟ್ರೋಲಿಗರು ಚಕ್ರವರ್ತಿ ಸೂಲೆಬೆಲೆ ಅವರ ಒಂದೊಂದೆ ವಿಡಿಯೋವನ್ನು ಟ್ವೀಟ್‌ ಮಾಡುವ ಮೂಲಕ ಸರಣಿ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಅಲ್ಲದೆ, ಚಕ್ರವರ್ತಿ ಹೇಳಿದ್ದೆಲ್ಲವೂ ಸುಳ್ಳುಗಳು ಎಂದು ಹೀಯಾಳಿಸಲು ಮುಂದಾಗಿದ್ದಾರೆ.

 

#Heng_pung_lee ಹ್ಯಾಶ್‌ಟ್ಯಾಗ್‌ ಅಡಿಯಲ್ಲಿಕಾಣಿಸಿಕೊಂಡ ಪ್ರಮುಖ ಟ್ವೀಟ್ ಗಳು ಇಂತಿವೆ.

 

 

 

 

 

 

 

 

 

 

 

 

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top