fbpx
ಸಮಾಚಾರ

ಮಾಜಿ ಪ್ರಧಾನಿ ದೇವೇಗೌಡರಿಗೆ ಕೃತಜ್ಞತೆ ಹೇಳಿದ ಅಸ್ಸಾಂ ಮುಖ್ಯ​ಮಂತ್ರಿ!

ಪ್ರವಾಹಕ್ಕೆ ಸಿಲುಕಿ ತತ್ತರಿಸಿಹೋಗುತ್ತಿರುವ ಅಸ್ಸಾಂ ರಾಜ್ಯಕ್ಕೆ ತುರ್ತು ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಕಾಳಜಿಗೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ದೇವೇಗೌಡ ಅವರಿಗೆ ಪತ್ರ ಬರೆದಿರುವ ಸೋನೋವಾಲ್‌ ಅವರು, ‘ಅಸ್ಸಾಂ ಜನತೆ ಬಗ್ಗೆ ಕಾಳಜಿ ವಹಿಸಿರುವುದಕ್ಕೆ ಧನ್ಯವಾದಗಳು’ ಎಂದಿದ್ದಾರೆ. ‘ಇಂತಹ ಸಮಯದಲ್ಲಿ ತಾವು ರಾಜ್ಯದ ಪರಿಸ್ಥಿತಿ ಕುರಿತು ಕಾಳಜಿ ವಹಿಸಿ ಪ್ರಧಾನಿಗಳ ಗಮನಸೆಳೆದಿರುವುದಕ್ಕೆ ಧನ್ಯವಾದಗಳು. ನಮ್ಮ ರಾಜ್ಯದ ಮೇಲೆ ತಾವು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ’ ಎಂದು ಸೋನೋವಾಲ್‌ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರವಾಹದ ಖುರಿತು ಪ್ರಧಾನಿ ಪತ್ರ ಬರೆದಿದ್ದ ದೇವೇಗೌಡರು ಅಸ್ಸಾಂನಲ್ಲಿ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಿ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ಅಸ್ಸಾಂನ ಜನರು ಪ್ರವಾಹದ ವಿರುದ್ಧ ಹೋರಾಡುವುದರ ಮಧ್ಯೆಯೇ ಕೊರೊನಾ ಸಾಂಕ್ರಾಮಿಕ ರೋಗವು ದೇಶಾದ್ಯಂತ ಉಲ್ಬಣಗೊಳ್ಳುತ್ತಿದೆ. ಕೊರೊನಾ ಸಾವುಗಳು ಮತ್ತು ಪ್ರವಾಹದಿಂದಾಗುತ್ತಿರುವ ಸ್ಥಳಾಂತರಗಳು ಬಹಳ ದುರದೃಷ್ಟಕರ. ಅಸ್ಸಾಂನ ಜನರು, ಮತ್ತು ಸಾಮಾನ್ಯವಾಗಿ ಈಶಾನ್ಯ ರಾಜ್ಯದ ಜನರು ತಮ್ಮನ್ನು ಆಶೀರ್ವದಿಸಿದ್ದಾರೆ. ಹಿಂದೆ ತಾವು ಪ್ರಧಾನಿಯಾಗಿದ್ದಾಗ ಮತ್ತು ಆನಂತರವೂ ಸಾಕಷ್ಟು ಪ್ರೀತಿಯನ್ನು ತೋರಿಸಿದ್ದಾರೆ, ಅಸ್ಸಾಂ ಜನರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುವುದಾಗಿ ದೇವೇಗೌಡ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top