fbpx
ಸಮಾಚಾರ

ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ನೆನೆದ ಹರ್ಭಜನ್ ಸಿಂಗ್: ಕಾರಣ ಏನು ಗೊತ್ತಾ?

ಸಾಲು ಮರದ ತಿಮ್ಮಕ್ಕನ ಬಗ್ಗೆ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿಶೇಷ ಟ್ವೀಟ್ ಮೂಲಕ ಬರೆದುಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ವೃಕ್ಷ ಮಾತೆಯ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

 

 

ಸಾಲುಮರದ ತಿಮ್ಮಕ್ಕ ಅವರ ಸಾಧನೆಯನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ಹರ್ಭಜನ್, ಇವರು 73,000 ಸಾವಿರಕ್ಕೂ ಅಧಿಕ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಆದರೆ ನಮ್ಮಲ್ಲಿ ಕೆಲವರಿಗೆ ಮಾತ್ರ ಇವರ ಬಗ್ಗೆ ಗೊತ್ತು. ಸಾಲುಮರದ ತಿಮ್ಮಕ್ಕನ ರೀತಿಯಲ್ಲಿ ನಾವು ಕೂಡ ಕಮ್ಮಿ ಎಂದರು ಒಂದು ಮರವನ್ನು ನೆಟ್ಟು ಬೆಳಸಬೇಕು. ಧನ್ಯವಾದಗಳು ಅಜ್ಜಿ ಎಂದು ಬರೆದು ಸಾಲುಮರದ ತಿಮ್ಮಕ್ಕ ಅವರು ಪ್ರಶಸ್ತಿ ಪತ್ರ ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಹೀಗೆ ಹರ್ಭಜನ್​ ತಿಮ್ಮಕ್ಕ ಅವರ ಫೋಟೋ ಹಾಕಿಕೊಳ್ಳುತ್ತಿದ್ದಂತೆ, ಸಾಕಷ್ಟು ಕನ್ನಡಿಗರು ಅವರ ಬಗ್ಗೆ ಟ್ವಿಟ್​ ಮಾಡುವ ಮೂಲಕವೇ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದ ಹೆಮ್ಮೆಯ ಕನ್ನಡಿಗರು ಎಂದು ಕೆಲವರು ಕಮೆಂಟ್​ ಮಾಡಿದರೆ, ನಿಮ್ಮ ಈ ಒಂದು ಟ್ವಿಟ್​ನಿಂದ ಕರ್ನಾಟಕದ ತಿಮ್ಮಕ್ಕ ವಿಶ್ವಖ್ಯಾತಿ ಪಡೆದುಕೊಳ್ಳಲಿದ್ದಾರೆ. ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top