fbpx
ಸಮಾಚಾರ

ಹಿಂದೂ ದೇವರನ್ನು ಹೀನವಾಗಿ ಅವಹೇಳನ ಮಾಡಿದ ಶಾಸಕ ಮುರುಗೇಶ್ ನಿರಾಣಿ! ನಿರಾಣಿ ವಿರುದ್ಧ ಕ್ರಮ ಕೈಗೊಳ್ಳುತ್ತಾ ಬಿಜೆಪಿ?

ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾರೆ. ರಾಮ, ಕೃಷ್ಣ, ಶಿವ ಸೇರಿದಂತೆ ಹಿಂದೂ ದೇವಾನುದೇವತೆಗಳ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಹೌದು, ಮುರುಗೇಶ್ ನಿರಾಣಿ ವಾಟ್ಸ್​ಆ್ಯಪ್​ನಲ್ಲಿ ಬ್ರಹ್ಮ, ವಿಷ್ಣು, ರಾಮ, ಕೃಷ್ಣ, ಇಂದ್ರ ಮೊದಲಾದ ಹಿಂದೂ ಆರಾಧ್ಯ ದೇವರುಗಳ ಬಗ್ಗೆ ಅತ್ಯಂತ ಕೀಳಾದ ಮೆಸೇಜನ್ನು ಫಾರ್ವಡ್ ಮಾಡಿದ್ದಾರೆ. ಈ ಮೂಲಕ ಆಸ್ತಿಕರ ಭಾವನೆಗೆ ಧಕ್ಕೆ ತಂದಿದ್ದಾರೆ, ದೇವರ ವಿಚಾರದಲ್ಲಿ ಕಿಡಿ ಹತ್ತಿಸಿದ್ದಾರೆ.

 

 

‘’ಮಗಳನ್ನೇ ಮದುವೆಯಾದ ಬ್ರಹ್ಮ ನಮಗೆ ದೇವರು. 16 ಸಾವಿರ ಹೆಂಡಂದಿರನ್ನು ಮದುವೆಯಾದ ದನಕಾಯುವ ಕೃಷ್ಣ ದೇವರು, ಮುಗ್ಧ ಬಾಲಕಿಯರು ಸರೋರವರದಲ್ಲಿ ಬೆತ್ತಲೆ ಸ್ನಾನ ಮಾಡುವಾಗ ಸೀರೆ ಕದ್ದವ ನಮ್ಮ ದೇವರು. ತಲೆ ಮೇಲೆ ಒಬ್ಬಳು, ತೊಡೆಯ ಮೇಲೆ ಒಬ್ಬಳನ್ನು ಇಟ್ಟುಕೊಂಡಾತ ನಮಗೆ ದೇವರು. ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ನಮ್ಮ ದೇವರು. ಹಾವು, ಹಂದಿ, ಕುದುರೆ, ಕತ್ತೆ, ನಾಯಿ, ಆಕಳು, ರತ್ನಪಕ್ಷಿ ಇನ್ನೂ ಹಲವು ದೇವರಾದರೆ, ಕಾಗೆ, ಗೂಬೆ, ಬೆಕ್ಕು ಇವು ಅಪಶಕುನ, ದೇವರುಗಳಿಗೆ ದೇವರೆನಿಸಿಕೊಂಡಾತ ಇಂದ್ರನು ಮಾಡಲಾರದ ಅನಾಚಾರಗಳು ಎಷ್ಟು? ಆದರೂ ನಮ್ಮ ದೇವರು. ಜರಾಸಂಧನ ಹೆಂಡತಿ ವೃಂದಾಳನ್ನು ಅತ್ಯಾಚಾರ ಮಾಡಿದ ವಿಷ್ಣು ನಮ್ಮ ದೇವರು, ಗಂಡನ ಸಂಪರ್ಕ ಪಡೆಯದೇ ಸೂರ್ಯನಿಂದ, ಯಮನಿಂದ, ಇಂದ್ರನಿಂದ, ವಾಯುವಿನಿಂದ, ಪುತ್ರರನ್ನು ಪಡೆದ ಕುಂತಿ ದೇವತೆ. ಸನಾತನಿಗಳು ತಮ್ಮ ತೀಟೆಗೆ ನೂರೆಂಟು ಕಥೆಕಟ್ಟಿ ಸ್ತ್ರೀಯರನ್ನು ದೇವದಾಸಿಯರನ್ನಾಗಿ ಮಾಡಿದರು. ಸೂಳೆಯರನ್ನಾಗಿ ಮಾಡಿದರು. ದೇಹ ಸುಖ ಸವಿಯಲು ಬೆತ್ತಲೆ ಮೆರವಣಿಗೆ ಆಚರಣೆಗೆ ತಂದರು’’

‘’ವಿಶ್ವಗುರು ಅಪ್ಪ ಬಸವಣ್ಣ, ಪತಿತೆಯರನ್ನು ತಾಯಿಯಾಗಿ ಕಂಡ ಜಗತ್ತಿನ ಏಕೈಕ ದಾರ್ಶನಿಕರು, ದಯವೇ ಧರ್ಮದವೆಂದರು. ಕಾಯಕವೇ ಕೈಲಾಸವೆಂದರು. ಸ್ತ್ರೀಯರಿಗೆ ಗೌರವ ಸಮಾನತೆ ತಂದರು. ಸ್ತ್ರೀ ಸೂತಕತೆಗೆ ವಿರೋಧಿಸಿದರು. ಸಕಲರೂ ಸಮಾನರೆಂದರು. ದೇಹವೇ ದೇಗುಲವೆಂದರು, ದಾಸೋಹದ ಹರಿಕಾರರು, ಕರಸ್ಥಲದಲ್ಲಿ ಚುಳುಕಾಗಿಸಿದ ಇಷ್ಟಲಿಂಗದ ಪರಿಕಲ್ಪನೆಯಲ್ಲಿ ಬ್ರಹ್ಮಾಂಡ (ಯೂನಿವರ್ಸ್) ವನ್ನೇ ಪೂಜಿಸಿ ವಿಶ್ವ ವೈಶಾಲ್ಯತೆಯನ್ನು ಜಗಕೆ ತೋರಿಸಿದವರು. ಅನುಭವ ಮಂಟಪದ ಸೃಷ್ಟಿಕರ್ತರು, ಶರಣು ಶರಣಾರ್ಥಿ ಎಂದರು. ಸಕಲ ಜೀವಾತ್ಮರಿಗೂ ಲೇಸಾಗಲೆಂದರು. ಮೂಢನಂಬಿಕೆ, ಪವಾಡ, ಕಂದಾಚಾರ, ಉಚ್ಛ , ನೀಚ, ನಿಯಮ ವಿರೋಧಿಸಿದ ಧೀಮಂತ ಧೀರರು. ಜಗದ ಪ್ರಥಮ ಪ್ರಧಾನ ಮಂತ್ರಿಗಳು, ಸರಳತೆಯ ಮಹಾನ್ ಬುದ್ಧಿವಂತ ವಚನ, ಸಾಹಿತ್ಯಜ್ಞರು, ಅರ್ಥಶಾಸ್ತ್ರಜ್ಞರು, ಉಣಲು ಕಲಿಸಿದವರು, ಉಡಲು ಕಲಿಸಿದವರು. ಪ್ರಾಮಾಣಿಕ ದುಡುಮೆಯೇ ನಾಡಿನ ಸಂಪತ್ ಅಭಿವೃದ್ಧಿ ಎಂದರು. ಗುರು ಲಿಂಗ ಜಂಗಮ ಷಟ್​ ಸ್ಥಲ ಅಷ್ಠಾವರಣ ಅನೇಕ ಪ್ರಥಮಗಳ ಜನಕರು, ಪ್ರಜಾಸತ್ತಾತ್ಮಕ ಲಿಂಗಾಯತ ಧರ್ಮ ಸಂಸ್ಥಾಪಕರೂ ಆದ ವಿಶ್ವಗುರು ಬಸವಣ್ಣನವರು’’ ಎಂದು ಬರೆದಿರುವ ಸಂದೇಶವನ್ನು ಇಂದು ಮುಂಜಾನೆ 5.28ಕ್ಕೆ ಗಂಟೆಗೆ ವಾಟ್ಸ್​ಌಪ್​​ ಗ್ರೂಪ್​​ನಲ್ಲಿ ಮುರುಗೇಶ್ ನಿರಾಣಿಯವರ ಪರ್ಸನಲ್​ ಮೊಬೈಲ್​ನಿಂದ ಮೆಸೇಜ್​ ಮಾಡಿದ್ದಾರೆ.

ತಪ್ಪಾಗಿದೆ ಕ್ಷಮಿಸಿ:
ನಂತರ ಸ್ವತಃ ನಿರಾಣಿಯವರು ಮೆಸೇಜ್ ಮಾಡಿ ‘ಒಂದು ಮೆಸೇಜ್ ತಪ್ಪಾಗಿ ಬಂದಿದೆ ದಯವಿಟ್ಟು ಡಿಲೀಟ್ ಮಾಡಿರಿ’ ಎಂದು ಕೈ ಮುಗಿಯುವ ಸಿಂಬಲ್​ಗಳನ್ನು ಹಾಕಿ ಗ್ರೂಪ್​ನಲ್ಲಿರುವ ಸದಸ್ಯರ ಬಳಿ ಬೆಳಗ್ಗೆ 8.35ಕ್ಕೆ ಮನವಿ ಮಾಡಿದ್ದಾರೆ. ಪೋಸ್ಟ್​ ವೈರಲ್​ ಆಗ್ತಿದ್ದಂತೇ ಮುರುಗೇಶ್ ತನ್ನ ಗ್ರೂಪ್​ನಿಂದ ತಾನೇ ಲೆಫ್ಟ್ ಆಗಿದ್ದಾರೆ.

ನಿರಾಣಿಯವರ ಈ ಪೋಸ್ಟ್ ನೋಡಿ BJP ನಾಯಕರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೋ? ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ. ಹಿಂದೂ ಧರ್ಮದ ಬಗ್ಗೆ ನಿಜವಾಗಿಯೂ ಕಿಂಚಿತ್ತಾದರೂ ಕಾಳಜಿ ಇದ್ದರೇ ಮುರುಗೇಶ್ ನಿರಾಣಿವಿರುದ್ಧ ಕ್ರಮ ಜರುಗಿಸಿ ಪಕ್ಷದಿಂದ ತೆಗೆಯಬೇಕು, ಇಲ್ಲದಿದ್ದರೆ BJPಯದ್ದು ಕೇವಲ ಬೂಟಾಟಿಕೆಯ ಹಿಂದುತ್ವ ಎಂದು ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಸಾಮಾನ್ಯ ಕಾರ್ಯಕರ್ತರು ಕೂಡ ಆಗ್ರಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top