fbpx
ಸಮಾಚಾರ

ಆಧುನಿಕ ಭಗೀರಥ ಕಾಮೇಗೌಡರಿಗೆ ಕೊರೋನಾ ಪಾಸಿಟಿವ್

ಆಧುನಿಕ ಭಗೀರಥನೆಂಬ ಖ್ಯಾತಿಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಕಾಮೇಗೌಡ ರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸಧ್ಯ ಕಾಮೇಗೌಡರು ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಬಲಗಾಲು ಗಾಯವಾಗಿ ನೋವಿನಿಂದ ಮಳವಳ್ಳಿಯ ತಾಲೂಕು ಆಸ್ಪತ್ರೆ, ಮಂಡ್ಯ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದ ಕಾಮೇಗೌಡರಿಗೆ ಇತ್ತೀಚಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಗ ಅವರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಲಪಡಿಸಲಾಗಿದ್ದು ಇದೀಗ ಕಾಮೇಗೌಡರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ.

ಕಾಮೇಗೌಡರು ಕುರಿ ಕಾಯುತ್ತಲೇ ಸ್ವಂತ ಹಣದಿಂದ ಸುಮಾರು ೧೬ ಕೆರೆ ನಿರ್ಮಿಸುವ ಮೂಲಕ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಗಾಗಿ ಇಡೀ ದೇಶ ಮಾತ್ರವಲ್ಲ ವಿಶ್ವದಲ್ಲೇ ಹೆಸರುವಾಸಿಯಾಗಿದ್ದರು. ಪ್ರಧಾನಿ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೂಡ ಕೆರೆ ಕಾಮೇಗೌಡ ಅವರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅಲ್ಲದೇ ಅವರ ಕಾರ್ಯಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿ ಉಚಿತವಾಗಿ ಬಸ್ ಪಾಸ್ ವ್ಯವಸ್ಥೆ ಮಾಡಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top