fbpx
ಸಮಾಚಾರ

TRP ಹುಚ್ಚಿಗೆ ಬಿದ್ದಿರುವ ಮಾಧ್ಯಮಗಳ ವಿರುದ್ಧ ಸಚಿವ ಈಶ್ವರಪ್ಪ ಕೆಂಡಾಮಂಡಲ

ಬ್ರೇಕಿಂಗ್ ನ್ಯೂಸ್ ಹಸಿವಿಗೆ ಬಿದ್ದಿರುವ ಕನ್ನಡದ ಬಹುತೇಕ ಸುದ್ದಿ ವಾಹಿನಿಗಳು ಸಮಾಜದಲ್ಲಿ ಯಾವುದೇ ವಿದ್ಯಮಾನಗಳು ನಡೆದರೂ ಅಥವಾ ಯಾವುದೇ ವಿಷಯಗಳು ವೈರಲ್ ಆದರೂ ಅವಕ್ಕೆ ತಮಗೆ ಬೇಕಾದ ರೀತಿಯಲ್ಲಿ ಸುಣ್ಣ ಬಣ್ಣ ಬಳಿದು ಸುಳ್ಳು ಸುದ್ದಿಯನ್ನು ಬಿತ್ತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಸುದ್ದಿಬಾಕತನ ಹುಚ್ಚಿಗೆ ಬಿದ್ದಿರುವ ಇವರುಗಳು ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಿವೆ.. ಇದೀಗ ಇಂಥದೇ ಮನಸ್ಥಿತಿಯ ನ್ಯೂಸ್ ಚಾನೆಲ್ ವೊಂದು ಜನರನ್ನು ದಾರಿತಪ್ಪಿಸುವ ಕಾರ್ಯದಲ್ಲಿ ಮಗ್ನರಾಗಿದೆ.

ಇಂಥಾ ಸಮಾಜಘಾತುಕ ವಾಹಿನಿಗಳ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ರಾಜ್ಯದಲ್ಲಿನ ಅನೇಕ ಟಿವಿ ಚಾನಲ್ ಗಳನ್ನು ನೋಡಿದರೆ, ಪ್ರಪಂಚದಲ್ಲಿ ಇನ್ನು ಯಾರೂ ಬದುಕುವುದಿಲ್ಲವೇನೋ ಎಂಬ ರೀತಿ ಹೈಲೈಟ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಕೆಂಡಾಮಂಡಲಗಿದ್ದಾರೆ.

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ರಾಜ್ಯ ಸರ್ಕಾರ ಇಷ್ಟು ಶ್ರಮ ಹಾಕಿದರೂ ಕೂಡ ಏನು ವ್ಯವಸ್ಥೆ ಇಲ್ಲವೇನೋ ಎನ್ನುವ ರೀತಿ ಬಿಂಬಿಸಲಾಗಿದೆ. ಕೆಲವು ಶವ ಹೊತ್ತುಕೊಂಡು ಹೋಗುತ್ತಿರುವಂತಹ ರೂಪ ತೋರಿಸೋದನ್ನು ನೋಡಿದರೆ, ಯಾರೂ ಕೂಡ ಮೃತದೇಹಗಳಿಗೆ ಇಡೀ ರಾಜ್ಯದಲ್ಲಿ ಮಾಡುತ್ತಿರುವ ವ್ಯವಸ್ಥೆ ಅನಾಗರೀಕ ವ್ಯವಸ್ಥೆ ಎನ್ನುವ ಭಾವನೆ ತರುತ್ತಿದ್ದಾರೆ” ಎಂದು ಈಶ್ವರಪ್ಪ್ಪ ಮಾಧ್ಯಮಗಳ ಕಿಡಿಕಾರಿದರು.

ಒಟ್ಟಿನಲ್ಲಿ ಬ್ರೇಕಿಂಗ್ ನ್ಯೂಸ್ ದಾಹಕ್ಕೆ ಬಿದ್ದಿರುವ ಸುದ್ದಿ ವಾಹಿನಿಗಳು ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಿವೆ.. ಇನ್ನಾದರೂ ತಮ್ಮ ಕರ್ತವ್ಯ ನೆನೆದು ಸಮಾಜಕ್ಕೆ ಒಳ್ಳೆಯದಾಗುವ ಸಂದೇಶಗಳನ್ನ ನೀಡುವತ್ತ ನ್ಯೂಸ್ ಚಾನೆಲ್ಲುಗಳು ಗಮನಹರಿಸಬೇಕಿದೆ. ರಾಜಕೀಯ ಹಿತಾಸಕ್ತಿ, ಟಿಆರ್‌ಪಿ, ವ್ಯವಹಾರವನ್ನು ಮೀರಿ ಜನರ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಕಡೆಗೂ ವಾಹಿನಿಗಳು ಗಮನಕೊಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top