fbpx
ಸಮಾಚಾರ

ಸೋಶಿಯಲ್ ಮೀಡಿಯದಲ್ಲಿ ಸಕತ್ ವೈರಲ್ ಆಯ್ತು ಹೆಂಗ್ ಪುಂಗ್ ಲೀ ಪದ್ಯ

ತಮ್ಮ ಏಕಮುಖ ಆಲೋಚನೆಗಳ ಮೂಲಕವೇ ಬೆಂಬಲಿಗರು ಮತ್ತು ವಿರೋಧಿಗಳನ್ನು ಸಮನಾಗಿ ಹೊಂದಿರುವ ಲೇಖಕ ಚಕ್ರವರ್ತಿ ಸೂಲಿಬೆಲೆ. ‘ಯುವಬ್ರಿಗೇಡ್’, ‘ನಮೋ ಬ್ರಿಗೇಡ್’, ‘ಟೀಮ್ ಮೋದಿ’ ಎಂಬ ತಂಡದ ಮೂಲಕ ಪ್ರಧಾನಿ ಮೋದಿ ಪರವಾಗಿ ಪ್ರಚಾರ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಚಕ್ರವರ್ತಿ ಸೂಲಿಬೆಲೆಯ ಈಗ ಟ್ರೋಲಿಗರಿಗೆ ಆಹಾರವಾಗಲು ಕಾರಣ ಅವರ ಹಳೆಯ ವಿಡಿಯೊಗಳೇ, ಅವರ ಭಾಷಣದ ಹಲವು ತುಣುಕುಗಳನ್ನು ಮುಂದಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಟ್ವಿಟರ್ ನಲ್ಲಿ #Heng_pung_lee ಮತ್ತು #ಹೆಂಗ್_ಪುಂಗ್_ಲೀ ಎಂಬ ಹ್ಯಾಶ್‌ಟ್ಯಾಗ್ ಮೂಲಕ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಈ ಮದ್ಯೆ ಹೆಂಗ್ ಪಂಗ್ ಲೀ ಟ್ರೊಲ್ ಕುರಿತಾದ ಪದ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಶಿಧರ ಎಂಬುವವರು ಬರೆದಿದ್ದಾರೆ ಎನ್ನಲಾದ ಈ ಪದ್ಯ ಎಲ್ಲೆಡೆ ವೈರಲ್ ಆಗಿದೆ.

 

*’ಹೆಂಗ್ ಪುಂಗ್ ಲೀ’*

ನನಗೆ ಇಟ್ರಲ್ಲೋ ಹೆಸರು *’ಹೆಂಗ್ ಪುಂಗ್ ಲೀ’*
ಜನ್ರು ಕೊಡುವ ಒಂದೊಂದು ಏಟು ನಾನು ಹೆಂಗ್ ನುಂಗ್ ಲೀ?
ನನ್ನ ಸಹಾಯಕ್ಕೆ…

Muttu Raju ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 21, 2020

 

ಶಶಿಧರ ಬರೆದ ಹೆಂಗ್ ಪುಂಗ್ ಲೀ ಈ ರೀತಿ ಇದೆ:

    ‘ಹೆಂಗ್ ಪುಂಗ್ ಲೀ’

ನನಗೆ ಇಟ್ರಲ್ಲೋ ಹೆಸರು ‘ಹೆಂಗ್ ಪುಂಗ್ ಲೀ’
ಜನ್ರು ಕೊಡುವ ಒಂದೊಂದು ಏಟು ನಾನು ಹೆಂಗ್ ನುಂಗ್ ಲೀ?
ನನ್ನ ಸಹಾಯಕ್ಕೆ ಬರ್ತಿಲ್ಲ ಕಾಗೆ ಗುರುಮೂರ್ತಿ
ಡ್ರೋನ್ ಹಾರಿಸಲು ಹೋಗವ್ನೆ ಕಿರಿಕ್ ಕೀರ್ತಿ – Kirik Keerthi

ನೀನಾದ್ರೂ ಬಾರೇ ರಾಧಕ್ಕ
ನಾನು ಬರಲ್ಲಪ್ಪಾ , ಬಂದ್ರೆ ನನಗೂ ಗುಮ್ಮತಾರೆ ಪಕ್ಕಾ
ಹಂಗಂದ್ರೆ ನನ್ನ ಗತಿ ಏನಕ್ಕ?
ಎದುರುಗಡೆ ಇಲ್ವಾ ಹನುಮಕ್ಕ!

ನೀನಾದ್ರೂ ಕಾಪಾಡೋ ಹನುಮಕ್ಕ
ಶೇಷಕೃಷ್ಣ ಇದ್ನಲ್ಲ ರಾಧಕ್ಕನ ಪಕ್ಕ?
ಗುಮ್ಮಿಸ್ಕೊಳ್ಳೊದು ನನ್ನಿಂದ ಆಗಲ್ಲ ಹೋಗಪ್ಪ
ಯಶವಂತಪುರ ಬಸ್ ಸ್ಟ್ಯಾಂಡ್ ನಲ್ಲಿ ಇಲ್ವಾ ಪಬ್ಲಿಕ್ ರಂಗಪ್ಪ

ರಂಗಪ್ಪ ರಂಗಪ್ಪ ರಂಗಪ್ಪ
ನನ್ನ ನೋವು ನೀನು ಸ್ವಲ್ಪ ನುಂಗಪ್ಪ
ಪಬ್ಲಿಕ್ ನನಗೂ ಜಡಿದ್ರೆ ಹೆಂಗಪ್ಪಾ?
ಆಲ್ ರೈಟ್ ನೀನು ಮುಂದಕ್ಕೆ ಹೋಗಿ ಪುಂಗಪ್ಪ!

ರಂಭಾ ರಂಭಾ ರಂಭಾ
ಜನರು ಮುರಿದುಬಿಟ್ರಲ್ಲೋ ನನ್ನ ಒಣ ಜಂಭ
ಚಿನ್ನದ ರಸ್ತೆ ಮಾಡ್ತೀವಿ ಅಂತ ಯಾಕ್ ಬಿಟ್ಟೆ ರೈಲು?
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಿನಗೆ ತೋರಿಸ್ತಾರೆ ಜೈಲು!

ಕಸಿನ್ ಸಿಸ್ಟರ್ ಕಸಿನ್ ಸಿಸ್ಟರ್ ಕಸಿನ್ ಸಿಸ್ಟರ್
ಬಾಯ್ ಬಡ್ಕೊಳ್ದೆ ಅದೇನಂತ ಬೊಗಳು ಮಿಸ್ಟರ್
ನಿನ್ನಿಂದಲೇ ಬಂತು ನನಗೆ ‘ಹೆಂಗ್ ಪುಂಗ್ ಲೀ’ ನೇಮ್
ಇನ್ಮುಂದಾದ್ರೂ ಸಾಕು ಮಾಡಯ್ಯ ನಿನ್ನ ಸ್ಟುಪಿಡ್ ಗೇಮ್

ಮೋಗ್ಲಿ ಮೋಗ್ಲಿ ಮೋಗ್ಲಿ
ಈ ಪರಿ ಗುಮ್ಮಿದ್ರೆ ನಾನ್ ಎಲ್ಲಿಗೆ ಹೋಗ್ಲಿ?
ಸ್ವೀಸ್ ಬ್ಯಾಂಕಿನಿಂದ ಬ್ಲ್ಯಾಕ್ ಮನಿ ತರ್ತೀರಂತ ಹಗಲು ರಾತ್ರಿ ಪುಂಗಿದೆ
ಆದರೆ ಕಪ್ಪು ಕುಳಗಳ ಜೊತೆ ಡೀಲಿಂಗ್ ಮಾಡ್ಕೊಂಡು ನೀನೊಬ್ಬನೆ ನುಂಗಿದೆ.

ಎಲ್ಲಿಂದ ಬಂದಿಯೋ ತಾವರಕೆರೆ ಜ್ಞಾನಿ!
ಬಿಂಕದಿಂದ ಬೀಗುತ್ತಿದ್ದೆ ನಾನೊಬ್ಬ ಚಿನ್ನದ ರಸ್ತೆಯ ವಿಜ್ಞಾನಿ!!
ಜನರ ಮುಂದೆ ಮಾಡಿದೆ ನನ್ನನ್ನು ಅಜ್ಞಾನಿ!
ಸಾಮಾಜಿಕ ಜಾಲತಾಣದಲ್ಲಿ ಈಗ ನೀನೊಬ್ಬ ಸುಜ್ಞಾನಿ!!

Satish Palegar ಹೆಸರಿಟ್ಟವ್ನೆ ನನಗೆ ‘ಹೆಂಗ್ ಪುಂಗ್ ಲೀ’
ಹಗಲು ರಾತ್ರಿ ಕೊಡುವ ಏಟು
ನಾನ್ ಹೆಂಗ್ ನುಂಗ್ಲಿ?

-ಟಿ. ಶಶಿಧರ.

 

 

ಅಂದಹಾಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಹಳೆಯ ಭಾಷಣಗಳ ತುಣುಕುಗಳು ಹರಿದಾಟ ಆರಂಭಿಸಿದವು. ಅವುಗಳಲ್ಲಿ ಎಷ್ಟೋ ವಿಚಾರಗಳು ಭಾಷಣದ ಭರಾಟೆಯಲ್ಲಿ ಬಂದಿದ್ದರೂ, ಇವತ್ತಿನ ವಾಸ್ತವವನ್ನು ಅಣಕಿಸುವಂತಿವೇ. ಈ ಮೊದಲು ಚಕ್ರವರ್ತಿ ಸೂಲಿಬೆಲೆ ಸಾಕಷ್ಟು ವೇದಿಕೆಗಳಲ್ಲಿ ಭಾಷಣ ಮಾಡುವ ವೇಳೆ ಸಾಕಷ್ಟು ಉತ್ಪ್ರೇಕ್ಷೆಯುತವಾಗಿ ಮಾತನಾಡಿದ್ದರು, ಆದರೆ, ಆ ಭಾಷಣಗಳಲ್ಲಿ ಬಹುತೇಕ ಸತ್ಯಕ್ಕೆ ದೂರವಾದವು. ಹೀಗಾಗಿ, ಈ ವಿಚಾರ ಇಟ್ಟುಕೊಂಡೇ ಚಕ್ರವರ್ತಿ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

 

*’ಹೆಂಗ್ ಪುಂಗ್ ಲೀ’*

ನನಗೆ ಇಟ್ರಲ್ಲೋ ಹೆಸರು *’ಹೆಂಗ್ ಪುಂಗ್ ಲೀ’*
ಜನ್ರು ಕೊಡುವ ಒಂದೊಂದು ಏಟು ನಾನು ಹೆಂಗ್ ನುಂಗ್ ಲೀ?
ನನ್ನ ಸಹಾಯಕ್ಕೆ…

Mahalingappa Alabal ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 21, 2020

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top