fbpx
ಸಮಾಚಾರ

ವಂದೇ ಭಾರತ್ ಮಿಷನ್ ನಡಿಯಲ್ಲೂ ಕರೆತರಲಾಗದವರಿಗಾಗಿ ಖಾಸಗಿ ವಿಮಾನ ವ್ಯವಸ್ಥೆ ಮಾಡುತ್ತಿರುವ ಭಾರತೀಯರು.

ಕರೋನವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕೇಂದ್ರ ಸರ್ಕಾರ ವಂದೇ ಭಾರತ್ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ನಂತರ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಈವರೆಗೆ 137 ದೇಶಗಳಿಂದ ಮನೆಗೆ ಮರಳಿದ್ದಾರೆ.. ಆದರೆ ವಂದೇ ಭಾರತ್ ಮಿಷನ್ ಅಡಿಯಲ್ಲಿಯೂ ಕರೆತರಲಾಗದ ಜನರನ್ನು ಖಾಸಗಿ ವಿಮಾನಗಳ ಮೂಲಕ ಸಂಸದ ಜಿಸಿ ಚಂದ್ರಶೇಖರ್ ಮತ್ತು ಸೋನು ಸೂದ್ ತಾಯ್ನಾಡಿಗೆ ಕರೆತರಲು ವ್ಯವಸ್ಥೆ ಮಾಡಿದ್ದಾರೆ.

ವಿದೇಶಗಳಿಂದ ಬೆಂಗಳೂರಿಗೆ ಬಂದಿಳಿದ ಕನ್ನಡಿಗರು:
ರಾಜ್ಯಸಭಾ ಸಂಸದರರಾದ ಸನ್ಮಾನ್ಯ ಜಿ.ಸಿ ಚಂದ್ರಶೇಖರ್ ರವರು ವಿದೇಶಾಂಗ ವ್ಯವಹಾರ ಸಮಿತಿಯ ಸದಸ್ಯರಾಗಿದ್ದು ತಮ್ಮ ಗಮನಕ್ಕೆ ಆನ್ಲೈನ್ ಸೋಶಿಯಲ್ ಮೀಡಿಯಾ ಹಾಗು ಮಾಧ್ಯಮದಿಂದ ವಿದೇಶಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗು ಇತರೆ ನಾಗರಿಕರ ಮಾಹಿತಿ ತಿಳಿದ ಕೂಡಲೇ ಮರಳಿ ಭಾರತಕ್ಕೆ ಕರೆತರುವ ಸತತ ಪ್ರಯತ್ನವನ್ನು ಮಾಡಿದ್ದಾರೆ.

 

 

ಇದಕ್ಕೆ ಉದಾಹರಣೆಯಾಗಿ ಮಲೇಶಿಯಾದಲ್ಲಿ ಸಿಲುಕಿದ್ದ 97 ಮಂದಿಯನ್ನು ಹಾಗೂ ರಷ್ಯಾದಲ್ಲಿ ಸಿಲುಕಿದ್ದ ಇನ್ನೂರಕ್ಕೂ ಹೆಚ್ಚು ಜನ ಕನ್ನಡಿಗರನ್ನು ಭಾರತಕ್ಕೆ ಮರಳಿ ಕರೆತರಲು ಸಂಸದ ಜಿಸಿ ಚಂದ್ರಶೇಖರ್ ಸಫಲರಾಗಿದ್ದಾರೆ. ರಷ್ಯಾ ಮತ್ತು ಮಲೇಶಿಯಾದಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವಲ್ಲಿ ಸಂಸದ ಜಿಸಿ ಚಂದ್ರಶೇಖರ್ ನೆರವು ನೀಡಿದ್ದಾರೆ.

ಕೊರೋನ ವೈರಸ್ ಸೋಂಕಿನಿಂದಾಗಿ ಹೊರ ದೇಶಗಳಲ್ಲಿ ಅತಂತ್ರರಾಗಿರುವ ಕನ್ನಡಿಗರು ಭಾರತಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಹೊರ ದೇಶಗಳಲ್ಲಿನ ವಿದ್ಯಾರ್ಥಿಗಳು ಕೂಡಾ ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ವೀಡಿಯೋ ಮೂಲಕ ಸಂದೇಶ ಕಳುಹಿಸಿ ವಿನಂತಿಸಿಕೊಂಡಿದ್ದರು.

 

 

ಜೂನ್ ತಿಂಗಳಿನಲ್ಲಿ ಮಲೇಷಿಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ಮತ್ತು ಜುಲೈ ತಿಂಗಳಿನಲ್ಲಿ ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ, ಮತ್ತು ಕೇಂದ್ರ ಸಚಿವ ಜೈಶಂಕರ್ ಅವರ ಬಳಿ ಸಂಸದ ಜಿಸಿ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದರು.

ಸರ್ಕಾರದ ಹಣದಲ್ಲಿ (ವಂದೇ ಭಾರತ್ ಮಿಷನ್) ಕರೆತರಲು ಆಗದಿದ್ದರೂ ಪರವಾಗಿಲ್ಲ ವಿದ್ಯಾರ್ಥಿಗಳೇ ತಮ್ಮ ಸ್ವಂತ ಹಣದಲ್ಲಿ ಚಾರ್ಟೆಡ್ ಫ್ಲೈಟ್ ಬುಕ್ ಮಾಡಿಕೊಂಡು ಭಾರತಕ್ಕೆ ಬರಲು ಅನುಮತಿ ನೀಡಬೇಕೆಂದು ಜಿಸಿ ಚಂದ್ರಶೇಖರ್ ಪತ್ರ ಬರೆದಿದ್ದರು. ಜಿಸಿ ಚಂದ್ರಶೇಖರ್ ಅವರ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ವಿದೇಶಾಂಗ ಇಲಾಖೆ ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಭಾರತಕ್ಕೆ ಬರಲು ಅನುಮತಿ ನೀಡಿತ್ತು. ಪರಿಣಾಮ ದೂರದ ದೇಶಗಳಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳು ಭಾರತಕ್ಕೆ ಬಂದಿಳಿದಿದ್ದರು.

ಖಾಸಗಿ ವಿಮಾನ ಬುಕ್ ಮಾಡಿದ ಸೋನು ಸೂದ್:
ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಪಾಲಿಗೆ ನಟ ಸೋನು ಸೂದ್ ಹೀರೋ ಆಗಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಉಳಿದುಕೊಳ್ಳಲು ತಮ್ಮ ಐಶಾರಾಮಿ ಹೋಟೆಲ್ ಬಿಟ್ಟುಕೊಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ ಮುಂಬೈನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡುವ ಮೂಲಕ ಮನೆಗಳಿಗೆ ಮರಳಲು ಸಹಾಯ ಮಾಡಿದ್ದರು. ಇದೀಗ ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗಾಗಿ ವಿಶೇಷ ವಿಮಾನ ವ್ಯವಸ್ಥೆ ಮಾಡಿಸಿದ್ದಾರೆ.

 

 

ಈ ಬಾರಿ, ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಕಿರ್ಗಿಸ್ತಾನ್ (ಕಿರ್ಗಿಜ್ ರಿಪಬ್ಲಿಕ್) ನಲ್ಲಿ ಸಿಲುಕಿರುವ 4000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ನಟ ಸಹಾಯ ಮಾಡಲಿದ್ದಾರೆ. ಕಿರ್ಗಿಸ್ತಾನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಹಿಂದಿರುಗಲು ಚಾರ್ಟರ್ ವಿಮಾನವನ್ನು ಏರ್ಪಡಿಸಿದ್ದಾರೆ. ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಮನೆಗೆ ತಲುಪಲು ಸಹಾಯ ಮಾಡಲು ಬಿಷ್ಕೆಕ್‌ನಿಂದ ರಷ್ಯಾ ಬಳಿಯ ವಾರಣಾಸಿಗೆ ಜುಲೈ 22 ರಂದು ವಿಮಾನವನ್ನು ಪ್ರಾಯೋಜಿಸುವುದಾಗಿ ಅವರು ಘೋಷಿಸಿದ್ದಾರೆ. ಅವರು ಯಾವುದೇ ರೀತಿಯ ಹಣವನ್ನು ವಿಧಿಸುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ ಎಂದು ಅವರು ತಮ್ಮ ಹಿಂದಿನ ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ್ದರು.

“ಕಿರ್ಗಿಸ್ತಾನ್‌ನಲ್ಲಿ ಸಿಲುಕಿರುವ ಎಲ್ಲಾ ವಿದ್ಯಾರ್ಥಿಗಳು ಮನೆಗೆ ವಾಪಸ್ಸು ಬರುವ ಸಮಯ ಬಂದಿದೆ. ನಾವು ಜುಲೈ 22 ರಂದು ಮೊದಲ ಚಾರ್ಟರ್ ಬಿಷ್ಕೆಕ್ ನಿಂದ ವಾರನಾಸಿಗೆ ವಿಮಾನವನ್ನು ಆಯೋಜಿಸಿದ್ದೇವೆ,. ಇದರ ವಿವರಗಳನ್ನು ಸ್ವಲ್ಪ ಸಮಯದೊಳಗೆ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಫೋನ್‌ಗಳಿಗೆ ಕಳುಹಿಸಲಾಗುತ್ತದೆ. ಇತರ ರಾಜ್ಯಗಳ ಚಾರ್ಟರ್‌ಗಳು ಈ ವಾರವೂ ಹಾರಾಟ ನಡೆಸಲಿವೆ. ” ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top