fbpx
ಸಮಾಚಾರ

“ಸಿನಿಮಾ ಮಾಡೋಲ್ಲ; ದುಡ್ಡು ವಾಪಸ್ಸು ಕೊಡಪ್ಪ” ಪ್ರತಾಪ್ ಬಯೋಪಿಕ್ ಕೈಬಿಟ್ಟ ನಿರ್ದೇಶಕ ಅಡ್ವಾನ್ಸ್ ವಾಪಾಸ್ ಕೊಡುವಂತೆ ಮನವಿ

ವಿಶೇಷ ಡ್ರೋನ್ ತಯಾರಿಸಿದ್ದಾಗಿ ಸುಳ್ಳು ಹೇಳಿಕೊಂಡು ಓಡಾಡಿದ್ದ ಪ್ರತಾಪ್ ಈಗ ಎಲ್ಲರ ಮುಂದೆ ಬೆತ್ತಲಾಗಿದ್ದಾನೆ. ಪ್ರತಾಪನ ‘ಸಾಹಸ’ ಕಂಡು ಯಾರೆಲ್ಲಾ ಈತನನ್ನು ಹೊಗಳಿ ಹಟ್ಟಕ್ಕೇರಿಸಿದ್ದರೋ ಅವರೇ ಇದೀಗ ಛೀಮಾರಿ ಹಾಕುವಂಥ ಪರಿಸ್ಥಿತಿ ಎದುರಿಸುತ್ತಿದ್ದಾನೆ. ಈ ಮದ್ಯೆ ಪ್ರತಾಪ್ ಮೇಲೆ ಸಿದ್ಧವಾಗಬೇಕಿದ್ದ ಸಿನಿಮಾ ನಿಂತಿದೆ.

ನಿರ್ದೇಶಕ ರಾಜಶೇಖರ್ ಕೆಲವು ತಿಂಗಳುಗಳ ಹಿಂದೆ ಡ್ರೋನ್ ಪ್ರತಾಪ್ ಸಾಧನೆಯನ್ನು ಗುರುತಿಸಿ, ಅವರ ಕುರಿತು ಚಿತ್ರ ಮಾಡಬೇಕೆಂದು ರಾಜಶೇಖರ್ ಮುಂದಾಗಿದ್ದರು. ಪ್ರತಾಪ್ ಅವರನ್ನು ಭೇಟಿ ಮಾಡಿ ಈ ವಿಷಯ ಸಹ ಮಾತಾಡಿದ್ದರು. ಒಂದು ಲಕ್ಷ ಮುಂಗಡವನ್ನೂ ಕೊಟ್ಟಿದ್ದರು. ಈಗ ಚಿತ್ರ ಮಾಡುವ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದಾರೆ.

“ಆಗ ಪ್ರತಾಪ್`ನನ್ನು ಸಂಪರ್ಕಿಸಿ ಅವರ ಕಥೆಯನ್ನು ಸಿನಿಮಾ ಮಾಡೋಕೆ ಅನುಮತಿ ಪಡೆದಿದ್ದೆ. ಇಂತಹವರ ಬಗ್ಗೆ ಸಿನಿಮಾ ಮಾಡಿದರೆ ಯುವಜನಾಂಗಕ್ಕೆ ಸ್ಫೂರ್ತಿ ಕೊಟ್ಟಂತೆ ಆಗುತ್ತೆ. ನಮಗೂ ಒಬ್ಬ ಸಾಧಕನ ಸಿನಿಮಾ ಮಾಡಿದ ಆತ್ಮತೃಪ್ತಿ ಸಿಗುತ್ತೆ ಎಂಬ ಕಾರಣಕ್ಕೆ ಪ್ರತಾಪ್ ಅವರನ್ನು ಭೇಟಿ ಮಾಡಿದ್ದೆ. ಸಂಭಾವನೆಯಾಗಿ 2 ಲಕ್ಷ ಹಾಗೂ ಚಿತ್ರದಿಂದ ಬರೋ ಲಾಭಾಂಶದಲ್ಲಿ 20% ಕೊಡುವುದಾಗಿ ಮಾತುಕತೆ ನಡೆದಿತ್ತು. 1 ಲಕ್ಷ ರೂ. ಅಡ್ವಾನ್ಸ್‍ನ್ನೂ ಪ್ರತಾಪನಿಗೆ ಕೊಟ್ಟಿದ್ದೆ.”ಎಂದಿದ್ದಾರೆ ರಾಜಶೇಖರ್.

“ನಾನು ಅವರ ಕುರಿತ ಚಿತ್ರ ಮಾಡುವುದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಚಿತ್ರ ಮಾಡುವ ಯೋಚನೆಯನ್ನು ಸಂಪೂರ್ಣ ಕೈಬಿಟ್ಟಿದ್ದೇನೆ. ದಯವಿಟ್ಟು ಹಣವನ್ನು ಹಿಂದಿರುಗಿಸಲು ಅವರಿಗೆ ಮನವಿ ಮಾಡಿದ್ದೇನೆ’ ಎನ್ನುತ್ತಾರೆ ರಾಜಶೇಖರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top