fbpx
ಸಮಾಚಾರ

ಕೊರೋನಾ ಗೆದ್ದ ಸಂಸದೆ ಸುಮಲತಾ ಅಂಬರೀಶ್ ಜನತೆಗೆ ಹೇಳಿದ್ದೇನು..?

ಮಂಡ್ಯ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್​ ಅವರು ಕೊವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ತಾವು ಕೊರೋನಾ ಸೋಂಕಿನಿಂದ ಮುಕ್ತವಾಗಿರುವುದನ್ನು ಸುಮಲತಾ ಅಂಬರೀಶ್ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದಾರೆ.

ಸುಮಲತಾ ಟ್ವಿಟರ್ ಮೂಲಕ ಹೇಳಿರುವ ಸಾಲುಗಳ ಯತಾವತ್ತಿನ ರೂಪ ಈ ರೀತಿ ಇದೆ:

ಆತ್ಮೀಯರೆ ನಮಸ್ಕಾರ,

ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್‌ ಮುಗಿಸಿ, ಕೊವಿಡ್‌ ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಮಗದೊಮ್ಮೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಈ ಸುದ್ದಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲು. ಖುಷಿಯಾಗುತ್ತಿದೆ.

ತಮ್ಮೊಂದಿಗೆ ಲವಲವಿಕೆಯಿಂದ ಬೆರೆಯಲು ಇನ್ನೂ ನಾಲ್ಕೈದು. ವಾರ ಮನೆಯಲ್ಲೇ ವಿಶ್ರಾಂತಿ ಪಡೆಯಲು ವೈದ್ಯರು ನನಗೆ ಸಲಹೆ ನೀಡಿದ್ದಾರೆ. ದೇಹಕ್ಕೆ ಚೈತನ್ಯ ತುಂಬಲು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಅನಿವಾರ್ಯ.

ಕೊರೊನಾ ಪಾಸಿಟಿವ್‌ ಆದ ಸಮಯದಲ್ಲಿ ನೀವೆಲ್ಲ ನನಗಾಗಿ ಪ್ರಾರ್ಥಿಸಿದ್ದೀರಿ. ಶುಭ ಹಾರೈಸಿದ್ದೀರಿ. ಬೇಗ ಗುಣಮುಖ ಆಗುವಂತೆ ಶುಭ ಕೋರಿದ್ದೀರಿ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಈ ಪ್ರೀತಿಗೆ ನಾನು ಖುಣಿ ಆಗಿದ್ದೇನೆ.

ಜತೆಗೆ ದೇವರ ಅನುಗ್ರಹ ಮತ್ತು ವೈದ್ಯರಾದ ಡಾ.ಸತೀಶ್‌ ಅವರ ಚಿಕಿತ್ಸೆ ಮತ್ತು ಸಲಹೆ ನನ್ನಲ್ಲಿ ಸಾಕಷ್ಟು ಧೈರ್ಯ ತಂದವು. ಕೊರೋನಾ ಗೆದ್ದು ಬರುವಲ್ಲಿ ಸಹಕಾರಿ ಆದವು. ಆದಷ್ಟು ಬೇಗ ಮತ್ತೆ ನಿಮ್ಮ ಸೇವೆಗೆ ನಾನು ಬರಲು ಎದುರು. ನೋಡುತ್ತಿದ್ದೇನೆ. ನಿಮ್ಮ ಕಾಳಜಿ ಮತ್ತು ಹಾಕೈಕೆಗೆ ನನ್ನ ಕೃತಜ್ಞತೆ ಪದ ಸಣ್ಣದಾಗಬಹುದು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸವನ್ನು ಯಾವತ್ತೂ ನಾನು ಮರೆಯಲಾರೆ.

ಕೋವಿಡ್‌ ಪಾಸಿಟಿವ್‌ ಆದ ಜನರು ಹೆದರಬೇಕಿಲ್ಲ. ದಯವಿಟ್ಟು, ವೈದ್ಯರು ಹೇಳುವ ಎಲ್ಲ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿ, ಅನುಸರಿಸಿ. ಸದಾ ಸಕಾರಾತ್ಮಕವಾಗಿ ಯೋಚಿಸಿ. ಯಾವುದೇ ಕಾರಣಕ್ಕೂ ಅಧೈರ್ಯ ಪಡಬೇಡಿ. ಕೊರೋನಾ ಪಾಸಿಟಿವ್‌ ಅನ್ನು ನಿಮ್ಮ ಪಾಸಿಟಿವ್‌ ಆಲೋಚನೆಯ ಮೂಲಕ ಗೆಲ್ಲಿ.

ಎಲ್ಲೇ ಇರಿ ಸೇಫ್‌ ಆಗಿರಿ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top