fbpx
ಸಮಾಚಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಎದುರಾಯ್ತು ಸಂಕಷ್ಟ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿವಾದಗಳಿಂದ ಸದಾ ದೂರ ಉಳಿಯಲು ಬಯಸುತ್ತಾರೆ. ಆದರೆ, ಕೆಲವೊಮ್ಮೆ ವಿವಾದಗಳನ್ನು ಅವರು ಅರಿವಿಲ್ಲದೆ ಮೈಮೇಲೆ ಎಳೆದುಕೊಂಡು ಬಿಡುತ್ತಾರೆ. ಈಗಲೂ ಅದೇ ರೀತಿ ಆಗಿದ್ದು, ದರ್ಶನ್​ ವಿರುದ್ಧ ಹೈಕೋರ್ಟ್ ರಿಜಿಸ್ಟರ್​ಗೆ ದೂರು ಸಲ್ಲಿಕೆ ಆಗಿದೆ.

ದರ್ಶನ್ ಅವರು ಆಷಾಢದ ಮೂರನೇ ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಸಲಿಗೆ ದೇವಾಲಯದ ಪ್ರವೇಶವನ್ನು ಕೊರೊನಾ ಕಾರಣಕ್ಕೆ ನಿರ್ಭಂಧಿಸಲಾಗಿತ್ತು. ಆ ಸಮಯದಲ್ಲಿ ದರ್ಶನ್ ನಿಯಮ ಉಲ್ಲಂಘನೆ ಮಾಡಿದ್ದರು. ಆಗಲೇ ಈ ವಿಷಯ ಚರ್ಚೆಯಾಗಿತ್ತು. ಇದೆ ವಿಚಾರವಾಗಿ ಈಗ ಅವರ ವಿರುದ್ಧ ದೂರು ದಾಖಲಾಗಿದೆ.

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಹಾಕದೇ ನಿಯಮ ಉಲ್ಲಂಘನೆ ಮಾಡಿದ್ದಾರೆ. ರೋಲ್ ಮಾಡೆಲ್ ಆಗಿರುವ ಇವರೇ ನೆಲದ ಕಾನೂನು ಸರಿಯಾಗಿ ಪಾಲಿಸಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಇವರು ಮಾಡಿರುವುದು ಅಪರಾಧವಾಗಿದೆ. ಇವರ ವಿರುದ್ಧ ಈ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ನಿರ್ದೇಶನಕ್ಕೆ ಮನವಿ ಮಾಡಿದ್ದಾರೆ.

ಜನ ಸಾಮಾನ್ಯರಿಗೊಂದು ನಿಯಮ ಹಾಗೂ ಪ್ರಭಾವಿಗಳಿಗೊಂದು ನಿಯಮ ಎಂಬಂತೆ ಭಾವಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ನಿಯಮಗಳ ಅನುಸಾರ ಕ್ರಮ ಕೈಗೊಳ್ಳುವಂತೆ ಅರ್ಜಿದಾರರ ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top