fbpx
ಸಮಾಚಾರ

ಕೊರೊನಾದಿಂದ ಸಂಪೂರ್ಣ ಗುಣಮುಖರಾದ ಧ್ರುವ ಸರ್ಜಾ ದಂಪತಿ; ‘ಅಣ್ಣನ ಆಶೀರ್ವಾದ’ ಎಂದ ‘ಆ್ಯಕ್ಷನ್‌ ಪ್ರಿನ್ಸ್’

ಕೆಲ ದಿನಗಳ ಹಿಂದಷ್ಟೇ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್‌ ಅವರಿಗೆ ಕೊರೊನಾ ವೈರಸ್‌ ಪಾಸಿಟಿವ್ ಆಗಿತ್ತು. ಈ ವಿಚಾರವನ್ನು ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಧ್ರುವ.. ಇದೀಗ ಧ್ರುವ ಸಂತೋಷದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅವರು ಮತ್ತು ಅವರ ಪತ್ನಿ ಪ್ರೇರಣಾ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಜುಲೈ 15ರಂದು ಧ್ರುವ ‘ನಾನು ಮತ್ತು ನನ್ನ ಪತ್ನಿಗೆ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆದರೆ ತುಂಬ ಕಡಿಮೆ ಲಕ್ಷಣಗಳಿವೆ. ಹೀಗಾಗಿ ನಾವು ಆಸ್ಪತ್ರೆಗೆ ದಾಖಲಾಗಿದ್ದೇವೆ. ಬೇಗ ಹುಷಾರಾಗುವ ನಂಬಿಕೆಯಿದೆ. ನಮ್ಮ ಜೊತೆ ಯಾರೆಲ್ಲಾ ಸಂಪರ್ಕದಲ್ಲಿದ್ದೀರೋ ಅವರೆಲ್ಲ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಿ, ಹುಷಾರಾಗಿ’ ಎಂದು ‌ಟ್ವಿಟರ್‌ನಲ್ಲಿ ಮನವಿ ಮಾಡಿದ್ದರು.

 

 

‘ನನ್ನ ಮತ್ತು ನನ್ನ ಪತ್ನಿಯ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಬಹುಶಃ ಇದಕ್ಕೆ ಕಾರಣ ನನ್ನ ಅಣ್ಣ ಚಿರಂಜೀವಿ ಸರ್ಜಾ ಅವರ ಆಶೀರ್ವಾದವೇ ಇರಬೇಕು. ನನ್ನೆಲ್ಲ ಪರಿಸ್ಥಿತಿಯಲ್ಲಿಯೂ ಸದಾ ನನಗೆ ಬೆಂಬಲವಾಗಿರುವ ನನ್ನ ಅಂಕಲ್‌ ಅರ್ಜುನ್ ಸರ್ಜಾ ಅವರಿಗೆ ಧನ್ಯವಾದಗಳು. ಡಾ. ಸುರ್ಜಿತ್ ಪಾಲ್‌ ಸಿಂಗ್ ಮತ್ತು ವೈದ್ಯಕೀಯ ಸಹಾಯಕ ರಾಜ್‌ಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top