fbpx
ಸಮಾಚಾರ

‘ಉಪಕರಣಗಳ ಬೇಡಿಕೆ ಇದ್ದಾಗ ಬೆಲೆ ಏರುಪೇರಾಗಿರಬಹುದು, ಆದರೆ ಅವ್ಯವಹಾರ ಆಗಿಲ್ಲ’: ಶ್ರೀರಾಮುಲು

ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಅರೋಗ್ಯ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ತಮ್ಮ ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಕೂಡ ಅವ್ಯಹಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಉಪಕರಣಗಳ ಡಿಮ್ಯಾಂಡ್ ಇದ್ದಂಥ ಸಂದರ್ಭದಲ್ಲಿ ಬೆಲೆ ಏರು ಪೇರು ಆರಿಬಹುದು ಅಷ್ಟೇ. ಆದರೆ, ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಅವ್ಯವಹಾರ ಆಗಿದ್ದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ. ಈ ಮಾತನ್ನು ಅವತ್ತು ಹೇಳಿದ್ದೇನೆ, ಇವತ್ತು ಅದನ್ನೇ ಹೇಳ್ತಿದ್ದೇನೆ ” ಎಂದು ಅರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

“ಕಳೆದ ಬಾರಿ ಅವರು ಆರೋಗ್ಯ ಇಲಾಖೆಯಲ್ಲಿ ಸಾವಿರಾರು ಕೋಟಿ ರೂ ಅವ್ಯವಹಾರ ಆಗಿದೆ ಎಂದು ಆರೋಪ ಮಾಡಿದರು. ಅದಕ್ಕೆ ನಾವು ಉತ್ತರ ಕೊಟ್ಟಿದ್ದೆ. ಆರೋಗ್ಯ ಇಲಾಖೆಯಿಂದ ಕೇವಲ 290 ಕೋಟಿ ರೂ ಮಾತ್ರ ಖರ್ಚು ಆಗಿದೆ ಎಂದು ಹೇಳಿದ್ದೆ. ಈಗ ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆ 750 ಕೋಟಿ ಖರ್ಚು ಮಾಡಿದೆ ಎಂದು ಹೇಳುತ್ತಿದ್ದಾರೆ. ನಾನು ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ.” ಎಂದು ರಾಮುಲು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top