fbpx
ಸಮಾಚಾರ

“ನಾನು ಒಳ್ಳೆಯ ಹುಡುಗಿಯಲ್ಲ, ನನಗೆ ದಯಾಮರಣ ನೀಡಿ” ನಟಿ ಜಯಶ್ರೀ ರಾಮಯ್ಯ ಮತ್ತೊಂದು ಆಘಾತಕಾರಿ ಪೋಸ್ಟ್

ಈ ಜಗತ್ತಿಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ವಿಕ್ಷಿಪ್ತ ಪೋಸ್ಟ್ ಹಾಕುವ ಮೂಲಕ ಆತಂಕ ಮೂಡಿಸಿದ್ದ ತುಂಬಾ ಖಿನ್ನತೆಯಿಂದ ಬಳಲುತ್ತಿರುವ ಬಿಗ್ ಬಾಸ್ ಸ್ಪರ್ಧಿ, ನಟಿ ಜಯಶ್ರೀ ರಾಮಯ್ಯ ದಯಾಮರಣಕ್ಕೆ ಬೇಡಿಕೆ ಇರಿಸಿದ್ದಾರೆ.

 

I ain’t expecting financial help from Sudeep sir as ama a loser I need MERCY KILLING!!!

Jayashree Ramaiah ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜುಲೈ 25, 2020

 

“ನಾನು ಯಾರ ಬಳಿಯೂ ಧನಸಹಾಯ ಕೇಳಿಲ್ಲ. ಸುದೀಪ್​ ಸರ್​ ಹತ್ರನೂ ನಾನು ಆರ್ಥಿಕ ಸಹಾಯವನ್ನು ಕೇಳಿಲ್ಲ. ನನಗೆ ಹಣದ ಸಮಸ್ಯೆ ಏನೂ ಇಲ್ಲ. ನನಗೀಗ ಬೇಕಾಗಿರುವುದು ಒಂದೇ ಅದು ನನ್ನ ಸಾವು. ನಾನು ತುಂಬಾ ಖಿನ್ನತೆಯಲ್ಲಿದ್ದೇನೆ. ನನ್ನ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ.

 

Jayashree Ramaiah ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜುಲೈ 25, 2020

 

“ಕುಟುಂಬದ ಸಮಸ್ಯೆಯಾದರೆ, ನನಗೆ ತುಂಬಾ ಮೋಸ ಮಾಡಿದ್ದಾರೆ. ಅಲ್ಲದೆ, ಚಿಕ್ಕ ವಯಸ್ಸಲ್ಲಿ ನನಗೆ ಆಗಬಾರದ ಘಟನೆಯೆಲ್ಲ ನಡೆದಿದೆ. ನನ್ನ ಕೈಯಲ್ಲಿ ಅದ್ಯಾವುದನ್ನೂ ಮರೆಯಲು ಆಗುತ್ತಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ನಾನು ತುಂಬಾ ನೋವಿನಲ್ಲಿದ್ದೇನೆ. ನನಗೆ ದಯಾಮರಣವನ್ನು ನೀಡಿ, ನಾನು ಒಳ್ಳೆಯ ಹುಡುಗಿಯಲ್ಲ ನಾನು ಸಾಯಬೇಕು. ನಾನು ನಿರೀಕ್ಷೆ ಮಾಡುತ್ತಿರುವುದು ದಯಾಮರಣ ಒಂದೇ” ಎಂದು ಫೇಸ್ಬುಕ್ ನಲ್ಲಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top