fbpx
ಸಮಾಚಾರ

ಲೈವ್ ನಲ್ಲೇ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆ ಯತ್ನ ; ಆಸ್ಪತ್ರೆಗೆ ದಾಖಲು

ನಾಗಮಂಡಲ, ಸೂರ್ಯವಂಶ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ವಿಜಯಲಕ್ಷ್ಮೀ ಅವರು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಸಾಕಷ್ಟು ದಿನಗಳಿಂದ ನಾನು ಒತ್ತಡದಲ್ಲಿದ್ದೇನೆ ಆ ಒತ್ತಡವನ್ನ‌ ನಿಭಾಯಿಸಲಿ ಆಗ್ತಿಲ್ಲ. ಹೀಗಾಗಿ ಸಾಯಲು ಇಚ್ಛೀಸುತ್ತೇನೆ ಅಂತ ಪೋಸ್ಟ್ ಮಾಡಿರೋ ವಿಜಯಲಕ್ಷ್ಮಿ ತಾನು ಬಿಪಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ನಟಿ ವಿಜಯಲಕ್ಷ್ಮೀ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಮತ್ತು ಈ ವಿಡಿಯೋವನ್ನು ತನ್ನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

 

 

My last video
Good bye to all my dear friends and well-wishers

Vijaya Lakshmi ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜುಲೈ 26, 2020

 

“ನಾನು ಕನ್ನಡದ ನಟಿ ಎಂಬ ಒಂದೇ ಒಂದು ಕಾರಣಕ್ಕೆ ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಸೀಮನ್ ಎಂಬ ನಟ ಮತ್ತು ರಾಜಕಾರಣಿ ಹಾಗೂ ಹರಿನಾಡರ್ ಎಂಬುವವರು ನನ್ನನ್ನು ಬದುಕಲು ಬಿಡುತ್ತಿಲ್ಲ. ನಾನು ಈಗಾಗಲೇ ಮೂರು ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಬಿಪಿ ಲೋ ಆಗುತ್ತಿದೆ. ನನ್ನ ಸಾವಿಗೆ ಕಾರಣವಾದ ಸೀಮನ್ ಮತ್ತು ಹರಿನಾಡರ್​ ಇಬ್ಬರನ್ನೂ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಖ್ಯಾತ ನಟಿ ವಿಜಯಲಕ್ಷ್ಮೀ ವಿಡಿಯೋ ಮಾಡಿ ಟ್ವಿಟ್ಟರ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಜಯಲಕ್ಷ್ಮೀ ಅವರ ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top