fbpx
ಸಮಾಚಾರ

ವಿಲಕ್ಷಣ ಘಟನೆ: ಮಾಸ್ಕ್ ಹಾಕಿಲ್ಲವೆಂದು ಮೇಕೆಯನ್ನೇ ಬಂಧಿಸಿದ ಪೊಲೀಸರು

ಮಾಸ್ಕ್​​ ಹಾಕಿಕೊಳ್ಳದ ಜನರನ್ನು ಬಂಧಿಸುವ ಇಲ್ಲವೆ ಕೇಸ್​ ಹಾಕುವುದು ನೋಡಿದ್ದೇವೆ. ಆದರೆ ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಮಾಸ್ಕ್​​​​ ಹಾಕಿಕೊಳ್ಳದ ಆರೋಪದ ಮೇಲೆ ಬೆಕೋಗಂಜ್​​ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಮೇಕೆಯೊಂದನ್ನು ಕಾನ್ಪುರ್ ಪೊಲೀಸರು ಬಂಧಿಸಿದ್ದಾರೆ.

ಮೇಕೆಯನ್ನು ಜೀಪಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಮೇಕೆಯ ಮಾಲಿಕ ಸೈಫುದ್ದೀನ್ ಬೇಗ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಮನವಿ ಮಾಡಿ ತನ್ನ ಮೇಕೆಯನ್ನು ವಾಪಸ್ ಪಡೆದಿದ್ದಾನೆ. ಠಾಣೆಯ ಎದುರು ಕಟ್ಟಿಹಾಕಿದ್ದ ಮೇಕೆಯನ್ನು ಅದರ ಮಾಲಕನಿಗೆ ಒಪ್ಪಿಸಿದ ಪೊಲೀಸರು, ರಸ್ತೆಯಲ್ಲಿ ಪ್ರಾಣಿಗಳನ್ನು ಓಡಾಡಲು ಬಿಡಬಾರದು ಎಂದು ಎಚ್ಚರಿಸಿ ಕಳುಹಿಸಿದ್ದಾರೆ.

“ಕೊರೋನಾ ಬಂದ ನಂತರ ಜನರು ತಮ್ಮ ನಾಯಿಗಳಿಗೂ ಮಾಸ್ಕ್ ಧರಿಸುತ್ತಿದ್ದಾರೆ ಹಾಗಿದ್ದಾಗ ಮೇಕೆಗೆ ಏಕೆ ಮಾಸ್ಕ್ ಹಾಕಿಲ್ಲ?” ಎಂದು ಓರ್ವ ಪೊಲೀಸ್ ಸಿಬ್ಬಂದಿ ಪ್ರಶ್ನಿಸಿರುವುದು ವರದಿಯಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಹಾಸ್ಯಕ್ಕೆ ಗುರಿಯಾಗುತ್ತಿದ್ದಂತೆಯೇ ಪೊಲೀಸರು ಘಟನೆಯ ಬಗ್ಗೆ ಬೇರೆಯದ್ದೇ ರೀತಿ ಹೇಳಲು ಪ್ರಾರಂಭಿಸಿದ್ದಾರೆ. ಜನರು ಈಗ ತಮ್ಮ ನಾಯಿಗಳಿಗೂ ಮಾಸ್ಕ್ ಹಾಕುತ್ತಾರೆ. ಆದರೆ ಮೇಕೆಗೆ ಯಾಕೆ ಹಾಕುವುದಿಲ್ಲ. ಹಾಗಾಗಿ ಬಂಧಿಸಿದ್ದೇನೆ ಎನ್ನುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top