fbpx
ಸಮಾಚಾರ

ದುಬಾರಿ ವಿದ್ಯುತ್ ಬಿಲ್ ನೋಡಿ ದಂಗಾದ ಹರ್ಭಜನ್ ಸಿಂಗ್: ಬಿಲ್ ನೋಡಿ ಭಜ್ಜಿ ಹೇಳಿದ್ದೇನು ನೋಡಿ.

ಅನೇಕ ಸೆಲೆಬ್ರೆಟಿಗಳು ಜೂನ್‌ ತಿಂಗಳ‌ ನಂತರ ಬಂದ ಭಾರಿ ಮೊತ್ತದ ವಿದ್ಯುತ್‌ ಬಿಲ್‌ ನೋಡಿ ಹೌಹಾರಿದ್ದಾರೆ. ಪ್ರತಿ ತಿಂಗಳು ಬರುವ ವಿದ್ಯುತ್‌ ಬಿಲ್‌ಗಿಂತ ಜೂನ್‌ ತಿಂಗಳಲ್ಲಿ ಮೂರು ಪಟ್ಟು ಹೆಚ್ಚು ಬಂದಿದ್ದು, ತಮ್ಮ ಬಿಲ್‌ನ ಫೋಟೊಗಳನ್ನು ತೆಗೆದು ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

 

 

ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್‌ಗೆ ತಮ್ಮ ಒಂದು ತಿಂಗಳ ಮನೆಯ ವಿದ್ಯುತ್ ಬಿಲ್ ನೋಡಿ ಹೌಹಾರಿದ್ದಾರೆ. ಬರೋಬ್ಬರಿ 33,900 ರೂಪಾಯಿ ಬಿಲ್ ನೋಡಿದ ಹರ್ಭಜನ್ ಸಿಂಗ್, ಟ್ವಿಟರ್ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ತಿಂಗಳು ಹರ್ಭಜನ್ ಸಿಂಗ್‌ಗೆ ಮುಂಬೈ ವಿದ್ಯುತ್ ಸರಬರಾಜು ಕಂಪನಿಯಿಂದ ಮೆಸೇಜ್ ಬಂದಿದೆ. ನಿಮ್ಮ ಮನೆಯ ವಿದ್ಯುತ್ ಬಿಲ್ 33,900 ರೂಪಾಯಿ. ಬಿಲ್ ಪಾವತಿಯ ಅಂತಿಮ ದಿನಾಂಕ ಆಗಸ್ಟ್ 17. ಆನ್‌ಲೈನ್ ಪಾವತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಎಂದು ಮುಂಬೈ ಅದಾನಿ ಎಲೆಕ್ಟ್ರಿಸಿಟಿ ಸಪ್ಲೈ ಬೋರ್ಡ್‌ನಿಂದ ಬಿಲ್ ಮೆಸೇಜ್ ಬಂದಿದೆ.

ಹರ್ಭಜನ್ ಸಿಂಗ್ ಟ್ವಿಟರ್ ಮೂಲಕ ಈ ದುಬಾರಿ ಬಿಲ್ ಪ್ರಶ್ನಿಸಿದ್ದಾರೆ. ಇದು ನನ್ನ ಅಕ್ಕಪಕ್ಕದಲ್ಲಿರುವ ಎಲ್ಲಾ ಮನೆಗಳ ಬಿಲ್ ನನಗೆ ಕಳುಹಿಸಿದ್ದೀರೋ ಅಥವಾ ನನ್ನ ಮನೆಯ ಬಿಲ್ ಎಂದು ಹರ್ಭಜನ್ ಸಿಂಗ್ ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top