fbpx
ಸಮಾಚಾರ

ಪುತ್ರಿಯ ಅನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿದ್ದು ಸುಳ್ಳು: ಸತ್ಯಾಂಶ ಬಯಲು ಮಾಡಿದ ಅಧಿಕಾರಿಗಳು!

ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ರೈತ ಹಸು ಮಾರಿರುವ ಸುದ್ದಿ ಸುಳ್ಳು ಎಂದು ಖಚಿತವಾಗಿದೆ. ಎರಡ್ಮೂರು ದಿನಗಳ ಹಿಂದೆ ರೈತ ಕುಟುಂಬದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಾಲಿವುಡ್ ನಟ ಸೋನು ಸೂದ್ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗಿದ್ದರು.

ಈ ಬಗ್ಗೆ ಡಿಎನ್ಎ ಪತ್ರಿಕೆ ವರದಿ ಮಾಡಿದ್ದು, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ರೈತ ಕುಲದೀಪ್ ಕುಮಾರ್ ತಮ್ಮ ಹಸುವನ್ನು 6 ಸಾವಿರ ರೂ.ಗೆ ಮಾರಾಟ ಮಾಡಿ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದಾರೆ ಎಂದ ಸುದ್ದಿಗಳು ಪ್ರಕಟವಾಗಿತ್ತು. ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಕಾಂಗ್ರಾ ಜಿಲ್ಲಾಧಿಕಾರಿಗಳು ಪರಿಶೀಲನೆಗೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ನೈಜ ಚಿತ್ರಣ ಬಯಲಾಗಿದೆ.

ರೈತ ಕುಲದೀಪ್ ಕೊಟ್ಟಿಗೆಯಲ್ಲಿ ಜಾಗವಿಲ್ಲದ ಕಾರಣ ತನ್ನ ಹಸುವನ್ನು ಜುಲೈ 10ರಂದು ಪರಿಚಯಸ್ಥರಿಗೆ ಮಾರಿದ್ದನು. ಕುಲದೀಪ್ ಬಳಿ ಏಳು ಹಸುಗಳಿದ್ದವು. ಹೀಗಾಗಿ ಕೊಟ್ಟಿಗೆಯಲ್ಲಿ ಜಾಗವಿರಲಿಲ್ಲ. ಇನ್ನು ಮೂರು ತಿಂಗಳ ಹಿಂದೆಯೇ ಕುಲದೀಪ್ ಮಗಳಿಗೆ ಸ್ಮಾರ್ಟ್ ಫೋನ್ ಕೊಡಿಸಿದ್ದನು. ಗ್ರಾಮದಲ್ಲಿ ಸರ್ಕಾರಿ ಶಾಲೆಗಳಿದ್ದರೂ ತನ್ನ ಮಕ್ಕಳು ದುಬಾರಿ ಶುಲ್ಕದ ಖಾಸಗಿ ಶಾಲೆಗಳಿಗೆ ಸೇರಿಸಿದ್ದನು ಎಂದು ತಿಳಿದು ಬಂದಿದೆ. ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top