fbpx
ಸಮಾಚಾರ

ಬಿಪಿ, ಶುಗರ್​ ಇದ್ರೂ ಕೊರೊನಾ ಗೆದ್ದ ನಟ ಪ್ರೇಮ್ ತಾಯಿ: ಎಲ್ಲರೂ ಗಮನಿಸಬೇಕಾದ ಸಲಹೆ ನೀಡಿದ ‘ನೆನಪಿರಲಿ’ ನಟ

ಕೆಲ ದಿನಗಳ ಹಿಂದೆ ನಟ ಪ್ರೇಮ್ ಅವರ ತಾಯಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರ ತಾಯಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಖುಷಿಯ ಸಂಗತಿಯನ್ನು ಹೇಳಿಕೊಂಡಿರುವ ಪ್ರೇಮ್. ಅದರ ಜತೆಗೆ ಕೆಲವು ಮಹತ್ವದ ಸಲಹೆಗಳನ್ನೂ ಜನರಿಗೆ ನೀಡಿದ್ದಾರೆ.

ಪ್ರೇಮ್ ತಾಯಿ ವೈದ್ಯರ ಸಲಹೆ ಮೇರೆಗೆ ಪ್ರೇಮ್ ತಾಯಿ 14 ದಿನಗಳ ಕಾಲ ಕಿಮ್ಸ್​​​ನಲ್ಲಿ ಚಿಕಿತ್ಸೆ ಪಡೆದು ಕೊರೊನಾ ಮಣಿಸಿದ್ದಾರೆ. ಸದ್ಯ ಪ್ರೇಮ್ ತಾಯಿಗೆ ಕೊರೊನಾ ನೆಗೆಟಿವ್ ಬಂದಿದೆ. ಈ ಬಗ್ಗೆ ನಟ ಪ್ರೇಮ್ ವಿಡಿಯೋ ಮೂಲಕ ಮಾಹಿತಿ ಮಾಡಿದ್ದು, “ಕಿಮ್ಸ್ ಆಸ್ಪತ್ರೆಯಲ್ಲಿ ನನ್ನ ತಾಯಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅಲ್ಲದೇ ನನ್ನ ತಾಯಿಗೆ ಬಿಪಿ, ಶುಗರ್ ಎರಡೂ ಇತ್ತು, ಆತ್ಮಸ್ಥೈರ್ಯದಿಂದ ನನ್ನ ತಾಯಿ ಕೊರೊನಾವನ್ನ ಎದುರಿಸಿ ಗೆದ್ದಿದ್ದಾರೆ. ಇಂದು ಮೊದಲಿಗಿಂತಲೂ ಆರೋಗ್ಯವಾಗಿ ಮತ್ತೆ ಮನೆಗೆ ಬಂದಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ” ಎಂದು ವಿಡಿಯೋದಲ್ಲಿ ಪ್ರೇಮ್ ತಿಳಿಸಿದ್ದಾರೆ.

 

ವಿಡಿಯೋ ನೋಡಿ

 

 

ಕೊರೊನಾ ವೈರಸ್ ಕುರಿತಂತೆ ಎಲ್ಲೆಡೆ ಕೆಲವು ವದಂತಿ ಹರಡಿವೆ. 60 ವರ್ಷ ಮೇಲ್ಪಟ್ಟವರು, ಬಿಪಿ, ಶುಗರ್ ಇರುವವರಿಗೆ ಕೊರೊನಾ ಬಂದರೆ ಅವರು ಮತ್ತೆ ವಾಪಸ್ ಜೀವಂತವಾಗಿ ಬರುವುದಿಲ್ಲ ಎಂದು ವದಂತಿ ಹರಡಿದೆ. ಆದರೆ ಇದೆಲ್ಲವೂ ಸುಳ್ಳು ಸುದ್ದಿ. ನನ್ನ ತಾಯಿಗೆ 66 ವರ್ಷ, ಅವರಿಗೂ ಬಿಪಿ, ಶುಗರ್ ಇದೆ. ಆದರೂ ಧೈರ್ಯವಾಗಿ ಕೊರೊನಾ ಎದುರಿಸಿ ಮನೆಗೆ ನಗು ನಗುತ್ತಾ ವಾಪಸ್ ಬಂದಿದ್ದಾರೆ ಎಂದು ಎಲ್ಲರಿಗೂ ಧೈರ್ಯ ತುಂಬಿದರು.

ಬಿಪಿ, ಶುಗರ್ ಇರುವವರು ಮತ್ತು ಹಿರಿಯರು ದಯವಿಟ್ಟು ಯಾವುದೇ ರೀತಿಯ ಆತಂಕ, ಭಯಪಡಬೇಡಿ. ಧೈರ್ಯವಾಗಿರಿ, ನಿಮ್ಮ ಆತ್ಮಸ್ಥೈರ್ಯ ನಿಮ್ಮನ್ನು ನಗು ನಗುತ್ತಾ ವಾಪಸ್ ಮನೆಗೆ ಬರುವಂತೆ ಮಾಡುತ್ತದೆ. ಆದ್ದರಿಂದ ಯಾವುದೇ ವದಂತಿಗಳಿಗೂ ಕಿವಿ ಕೊಡಬೇಡಿ. ಯಾರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರೆಲ್ಲರೂ ಶೀಘ್ರವೇ ಗುಣಮುಖರಾಗಿ ಬರುವಂತೆ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top