fbpx
ಸಮಾಚಾರ

ಎತ್ತುಗಳಿಲ್ಲದೆ ತಾವೇ ಉಳುಮೆ ಮಾಡುತ್ತಿದ್ದ ಯುವತಿಯರಿಗೆ ಟ್ರಾಕ್ಟರ್ ಕೊಡಿಸಿ ಮಾನವೀಯತೆ ಮೆರೆದ ಸೋನು ಸೂದ್​.

ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರ ನೋವಿಗೆ ಸ್ಪಂದಿಸುವ ಮೂಲಕ ಸಮಸ್ತ ಭಾರತೀಯರ ಮನಗೆದ್ದಿರುವ ಬಾಲಿವುಡ್‌ ನಟ ಸೋನು ಸೂದ್‌, ಈಗ ಎತ್ತುಗಳಿಲ್ಲದೇ ರೈತನೊಬ್ಬ ಮಕ್ಕಳನ್ನೆ ಎತ್ತುಗಳನ್ನಾಗಿಸಿಕೊಂಡು ಹೊಲದಲ್ಲಿ ಉಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು, ಈ ವಿಡಿಯೋ ನೋಡಿದ್ದ ನಟ ಸೋನು ಸೂದ್ ತಾವು ನೀಡಿದ್ದ ಭರವಸೆಯಂತೆ ರೈತನಿಗೆ ಟ್ರ್ಯಾಕ್ಟ್ ಗಿಫ್ಟ್ ನೀಡಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೋರ್ ಜಿಲ್ಲೆಯ ಮದನಪಲ್ಲಿಯ ಟೊಮಾಟೊ ಬೆಳೆಗಾರನಿಗೆ ಎತ್ತುಗಳನ್ನು ಬಾಡಿಗೆ ಪಡೆದು ಉಳುಮೆ ಮಾಡುವಷ್ಟು ಶಕ್ತಿ ಇಲ್ಲ. ಅದರ ಜತೆಗೆ ಈ ಬಾರಿ ಕರೊನಾದಿಂದ ದೊಡ್ಡ ನಷ್ಟ ಉಂಟಾಗಿರುವುದು ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇದೀಗ ಈ ಕುಟುಂಬದ ಬೆನ್ನೆಲುಬಾಗಿ ಸೋನು ಸೂದ್​ ನಿಂತಿದ್ದು, ಟ್ರ್ಯಾಕ್ಟರ್ ಅನ್ನೇ ಕಳುಹಿಸಿಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ರೈತರೊಬ್ಬರು ತನ್ನ ಹೊಲದಲ್ಲಿ ಎತ್ತುಗಳಿಲ್ಲದ್ದಕ್ಕೆ ತನ್ನ ಇಬ್ಬರು ಹೆಣ್ಣು ಮಕ್ಕಳಿಂದಲೇ ನೇಗಿಲನ್ನು ಎಳೆಯಿಸಿ, ಉಳುಮೆ ಮಾಡ್ತಿದ್ದ ದೃಶ್ಯ ವೈರಲ್ ಆಗಿತ್ತು. ಈ ವೀಡಿಯೋ ನೋಡಿದ್ದ ಸೋನು ಸೂದ್ ಮೊದಲಿಗೆ ಆ ಕುಟುಂಬಕ್ಕೆ ಎರಡು ಎತ್ತುಗಳನ್ನು ಗಿಫ್ಟ್ ಮಾಡುವುದಾಗಿ ಹೇಳಿದ್ದರು. ನಂತರ ಎತ್ತುಗಳ ಬದಲಿಗೆ ಟ್ರ್ಯಾಕ್ಟರ್​ನ್ನೇ ಗಿಫ್ಟ್ ಮಾಡ್ತೀನಿ ಅಂತ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಕೆಲವೇ ಗಂಟೆಗಳಲ್ಲಿ ಟ್ರ್ಯಾಕ್ಟರ್​ ಗಿಫ್ಟ್ ಮಾಡಿದ್ದಾರೆ. ಇದರಿಂದ ಇಡೀ ಕುಟುಂಬ ಸಂತಸಗೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top