fbpx
ಸಮಾಚಾರ

ಆತ್ಮಹತ್ಯೆಗೂ ಮುನ್ನ ಮಾಡಿದ್ದ ವಾಟ್ಸ್ಆಪ್ ಮೆಸೇಜ್ ಶೇರ್ ಮಾಡಿದ ಸುಶಾಂತ್ ಸಹೋದರಿ: ಫೋಟೋ ವೈರಲ್!

ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಅಲ್ಲದೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿ ಬಂದಿತ್ತು.

ಸುಶಾಂತ್ ಆತ್ಮಹತ್ಯೆಯ ಬಗ್ಗೆ ತನಿಖೆಯಾಗಬೇಕು ಅಂತ ಸುಶಾಂತ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಸದ್ಯ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು ಆತ್ಮಹತ್ಯೆಗೂ ಮುನ್ನ ಸುಶಾಂತ್ ಯಾರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದರು. ಯಾರ ಜೊತೆ ಚಾಟ್ ಮಾಡಿದ್ದರುಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುಶಾಂಗ್ ಸಿಂಗ್ ಸಾಯುವ ಮುನ್ನ ಮಾಡಿದ್ದ ವಾಟ್ಸಪ್ ಸಂದೇಶವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಶಾಂತ್‌ ನಿಧನರಾಗಿದ್ದು ಜು.14ರಂದು. ಅದಕ್ಕಿಂತ ಕೇವಲ ನಾಲ್ಕು ದಿನ ಮುನ್ನ, ಅಂದರೆ ಜು.10ರಂದು ಅವರ ಅಕ್ಕ ಶ್ವೇತಾ ಸಿಂಗ್‌ ಜೊತೆ ಸುಶಾಂತ್‌ ಚಾಟ್‌ ಮಾಡಿದ್ದರು. ಅದರ ಸ್ಕ್ರೀನ್‌ ಶಾಟ್‌ ಅನ್ನು ಶ್ವೇತಾ ಸಿಂಗ್‌ ಇಂಟರ್‌ನೆಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಅಭಿಮಾನಿಗಳು ಕೂಡ ಶೇರ್‌ ಮಾಡುತ್ತಿದ್ದಾರೆ. ಯಾವುದೋ ಬೇಜಾರಿನಲ್ಲಿದ್ದ ಸುಶಾಂತ್‌ಗೆ ಸಮಾಧಾನ ಮಾಡುವ ಪ್ರಯತ್ನವನ್ನು ಆ ವಾಟ್ಸಪ್ ಸಂದೇಶದ ಮೂಲಕ ಮಾಡಿದ್ದರು ಶ್ವೇತಾ.

ಸುಶಾಂತ್‌ ಸಹೋದರಿ ಶ್ವೇತಾ ಅಮೆರಿಕದಲ್ಲಿ ನೆಲೆಸಿದ್ದಾರೆ. ‘ನೀನು ಕೂಡ ಇಲ್ಲಿಗೆ ಬಾ’ ಎಂದು ತಮ್ಮನಿಗೆ ಅವರು ಆಹ್ವಾನ ನೀಡಿದ್ದರು. ‘ಬರಬೇಕು ಎಂದು ನನಗೂ ತುಂಬಾ ಫೀಲ್‌ ಆಗುತ್ತಿದೆ ಅಕ್ಕಾ..’ ಎಂದು ಸುಶಾಂತ್ ರಿಪ್ಲೈ ಮಾಡಿದ್ದರು. ‘ದಯವಿಟ್ಟು ಬಂದುಬಿಡು. ಒಂದು ತಿಂಗಳು ಇಲ್ಲೇ ಇರಬಹುದು. ನಾವೆಲ್ಲರೂ ಜೊತೆಯಾಗಿ ಎಂಜಾಯ್‌ ಮಾಡಬಹುದು. ನಿನಗೂ ಸಮಾಧಾನ ಎನಿಸುತ್ತದೆ’ ಎಂದು ಶ್ವೇತಾ ಸಂದೇಶ ಕಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top