fbpx
ಸಮಾಚಾರ

ನಿಯಮ ಮೀರಿ ಮನೆಯಲ್ಲೇ ಕೋಟಿ ಕೋಟಿ ಗ್ಯಾಂಬ್ಲಿಂಗ್: ‘ಸಂತು ಸ್ಟ್ರೈಟ್ ಫಾರ್ವರ್ಡ್’ ಖ್ಯಾತಿಯ ನಟ ಬಂಧನ

ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು ತಮಿಳುನಾಡು ಕೊರೊನಾ ಸಂಕಷ್ಟದಲ್ಲಿದ್ದಾಗ ಈ ನಟ ಶಾಮ್ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಗ್ಯಾಂಬ್ಲಿಂಗ್‌ನಲ್ಲಿ ತೊಡಗಿದ್ದನ್ನೆನ್ನಲಾಗಿದೆ. ಕೇವಲ ಈ ನಟ ಮಾತ್ರವಲ್ಲ, ಇವನೊಂದಿಗೆ ತಮಿಳು ಚಿತ್ರರಂಗದ ಇನ್ನೂ ಹಲವಾರು ನಟರು ಪೋಕರ್ ಗೇಮ್ ಮತ್ತು ಗ್ಯಾಂಬ್ಲಿಂಗ್ ಆಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಚೆನ್ನೈ ಪೊಲೀಸರು ದಿಢೀರ್ ದಾಳಿ ಮಾಡಿ ನಟ ಶ್ಯಾಮ್ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಒಂದು ಮೂಲದ ಪ್ರಕಾರ ಜೂಜಾಟದಲ್ಲಿ ಕಾಲಿವುಡ್​ನ ಖ್ಯಾತನಾಮರೂ ಕೂಡ ಇದ್ದು, ನಟರೊಬ್ಬರು ಲಕ್ಷಾಂತರ ರೂ ಕಳೆದುಕೊಂಡಿದ್ದಾರಂತೆ. ಇದೇ ವಿಷಯವಾಗಿ ಜೂಜಾಡುತ್ತಿರುವ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ. ಇನ್ನು ಇನ್ನು ಈ ಜೂಜಾಟಕ್ಕೆ ಹಣದ ರೂಪದಲ್ಲಿ ಟೋಕನ್ ಗಳನ್ನು ಇಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರತೀ ಟೋಕನ್ ಗೆ ಇಂತಿಷ್ಟು ಹಣ ಎಂದು ಮೌಲ್ಯೀಕರಿಸಲಾಗಿತ್ತು. ಪ್ರತಿ ಟೋಕನ್​ಗೆ ಎಷ್ಟು ಮೌಲ್ಯವಿಡಲಾಗಿದೆ ಎಂಬುದು ವಿಚಾರಣೆ ಬಳಿಕ ಬಹಿರಂಗವಾಗಲಿದೆ.

ಕನ್ನಡದಲ್ಲೂ ನಟಿಸಿದ್ದ ಶಾಮ್:
ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶಾಮ್, ಕನ್ನಡ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಇನ್ನು ಕನ್ನಡದಲ್ಲಿ ಕಾಲಿವುಡ್​ ನಟ ನಾಲ್ಕು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ರಮ್ಯಾ-ರಕ್ಷಿತಾ ಜೋಡಿ ಜೊತೆಯಾಗಿ ಕಾಣಿಸಿಕೊಂಡ ತನನಂ ತನನಂ ಚಿತ್ರದ ಮೂಲಕ ಶಾಮ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದರು. ಇದರ ಬಳಿಕ ಅರ್ಜುನ್ ಸರ್ಜಾ ಅಭಿನಯದ ಗೇಮ್ ಸಿನಿಮಾ, ಹಾಗೆಯೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದಲ್ಲಿ ಶಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top