fbpx
ಸಮಾಚಾರ

ಚಿರು ಆತ್ಮದ ಜೊತೆ ಮಾತನಾಡಿದ ರಹಸ್ಯವನ್ನ ಬಯಲು ಮಾಡಿದ ಹುಲಿಕಲ್ ನಟರಾಜ್: ಅಸಲಿ ಸತ್ಯ ಬಿಚ್ಚಿಟ್ಟ ಹುಲಿಕಲ್ ನಟರಾಜ್!

ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರೆಯಾಗಿ ತಿಂಗಳುಗಳು ಕಳೆಯುತ್ತಾ ಬಂದಿವೆ. ಒಂದಷ್ಟು ಕಾಲ ಚಿರು ಅಗಲಿಕೆಯಿಂದ ಶಾಕ್ ಆಗಿದ್ದವರು, ಕಂಬನಿಗರೆದಿದ್ದವರೆಲ್ಲ ಮತ್ತೆ ತಂತಮ್ಮ ಬದುಕಿನ ಜಂಜಡಗಳಲ್ಲಿ ಕಳೆದು ಹೋಗಿದ್ದಾರೆ. ಚಿರು ಅವ್ರಕುಟುಂಬ ಇನ್ನೂ ನೆನಪಲ್ಲೇ ಮುಳುಗಿದ್ದಾರೆ.

ಆದರೆ ಈ ಮಧ್ಯೆ ಚಿರು ಆತ್ಮ ಮಾತನಾಡುತ್ತಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ವಿದೇಶಿ ಪ್ಯಾರಾ ನಾರ್ಮಲ್ ತಜ್ಞರೊಬ್ಬರು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹಾಕಿದ ವಿಡಿಯೋದಲ್ಲಿ ಚಿರು ಆತ್ಮ ಮಾತನಾಡುತ್ತೆ ಎಂದು ಹೇಳಲಾಗಿತ್ತು. ಈ ವಿಡಿಯೋ ಬಗ್ಗೆ ಹಲವಾರು ಮಂದಿ ಅನುಮಾನ ಹುಟ್ಟಿಹಾಕಿದ್ದರು. ಈಗ ಈ ಅನುಮಾನಕ್ಕೆ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಅವರು ಉತ್ತರ ಕೊಟ್ಟಿದ್ದಾರೆ.

 

 

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಹುಲಿಕಲ್ ನಟರಾಜು ಅವರು “ಆತ್ಮದ ಜೊತೆ ಮಾಡನಾಡಲು ಯಾವುದೇ ವ್ಯಕ್ತಿಗೆ ಸಾಧ್ಯವಿಲ್ಲ. ಇದು ಸಂಪೂರ್ಣ ಸುಳ್ಳು” ಎಂದು ಪ್ರತಿಪಾದಿಸಿದ್ದಾರೆ.

“ವಿದೇಶಿ ಪ್ಯಾರಾ ನಾರ್ಮಲ್ ತಜ್ಞನ ವಿಡಿಯೋದಲ್ಲಿ ರೇಡಿಯೋ ರೀತಿಯ ಒಂದೆರಡು ಎಲೆಕ್ಟ್ರಾನಿಕ್ ಯಂತ್ರಗಳನ್ನ ಉಪಯೋಗಿಸಿಕೊಂಡು ಆ ವಿಡಿಯೋ ಮಾಡಿದ್ದಾನೆ. ಆ ಎಲೆಕ್ಟ್ರಾನಿಕ್ ಉಪಕರಣಗಳ ಮುಂದೆ ನಾವು ಮಾತನಾಡಿದರೆ ಅವು ನಮ್ಮ ಮಾತನ್ನ ರೆಕಾರ್ಡ್ ಮಾಡಿಕೊಂಡು ಬೇರೊಂದು ಧ್ವನಿಯಲ್ಲಿ ಅರ್ಥವಾಗದ ರೀತಿಯಲ್ಲಿ ಶಬ್ದವನ್ನ ಹೊರಡಿಸುತ್ತದೆ. ಆ ವಿದೇಶಿ ಪ್ಯಾರಾ ನಾರ್ಮಲ್ ತಜ್ಞ ಇಂತಹ ಶಬ್ದವನ್ನೇ ಆತ್ಮದ ಧ್ವನಿ ಎಂದು ಜನರನ್ನ ನಂಬಿಸಿದ್ದಾನೆ ಮತ್ತು ಇದು ಶುದ್ಧ ಸುಳ್ಳು” ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ

“ಈ ತಜ್ಞ ಕೆಲವು ದಿನಗಳ ಹಿಂದೆ ಸುಶಾಂತ್ ಸಿಂಗ್ ರಾಜಪುತ್ ಅವರ ಆತ್ಮದ ಜೊತೆ ಕೂಡ ನಾನು ಮಾತನಾಡಿದ್ದೇನೆ ಎಂದು ವಿಡಿಯೋ ಮಾಡಿದ್ದ. ಸತ್ತ ವ್ಯಕ್ತಿಗಳ ಆತ್ಮದ ಜೊತೆ ಮಾತುನಾಡುತ್ತೇವೆ ಎಂಬುದು ದೊಡ್ಡ ಸುಳ್ಳು, ಯಾರು ಕೂಡ ಆತ್ಮದ ಜೊತೆ ಮಾತನಾಡಲು ಸಾಧ್ಯವಿಲ್ಲ. ಜನರ ಮುಗ್ದತೆ ಮತ್ತು ಭಾವನೆಗಳನ್ನ ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥಾ ವಿಡಿಯೋಗಳನ್ನ ನೋಡಿ ಮರುಳಾಗಬೇಡಿ” ಎಂದು ನಟರಾಜ್ ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top