fbpx
ಸಮಾಚಾರ

ಟ್ಯಾಂಕ್‍ಗೆ ಬಿದ್ದು ಮಹಿಳೆ ಆತ್ಮಹತ್ಯೆ: 3 ದಿನ ಅದೇ ನೀರು ಕುಡಿದ ಅಪಾರ್ಟ್‍ಮೆಂಟ್ ನಿವಾಸಿಗಳು

ನೀರಿನ ಟ್ಯಾಂಕ್​ಗೆ ಬಿದ್ದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್​ನಲ್ಲಿ ನಡೆದಿದೆ. ಯಲಹಂಕದ ಅಪಾರ್ಟ್​ಮೆಂಟ್​ನ ಕುಡಿಯುವ ನೀರಿನ ಟ್ಯಾಂಕ್ ಗೆ ಬಿದ್ದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

50 ವರ್ಷದ ಗೌರಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಶುಕ್ರವಾರ ಗೌರಿ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಹಣಕಾಸಿನ‌ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಮಹಿಳೆಯ ಶವ ಕುಡಿಯುವ ನೀರಿನ ಟ್ಯಾಂಕ್​ನಲ್ಲಿ ಪತ್ತೆಯಾಗಿದೆ.

ಇತ್ತ ಅಪಾರ್ಟ್‍ಮೆಂಟ್ ನಿವಾಸಿಗಳು ಅದೇ ಟ್ಯಾಂಕಿನ ನೀರು ಬಳಸುತ್ತಿದ್ದರು. ಹೀಗಾಗಿ ಯಾಕೋ ನೀರು ವಾಸನೆ ಬರುತ್ತಿದೆ ಎಂದು ಪ್ಲಂಬರ್ ನನ್ನು ಕರೆಸಿದ್ದಾರೆ. ಈ ವೇಳೆ ಟ್ಯಾಂಕಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕಳೆದ ಮೂರು ದಿನದಿಂದ ಇದೇ ಟ್ಯಾಂಕ್‌ ನ ನೀರನ್ನು ನಿವಾಸಿಗಳು ಇದೇ ನೀರನ್ನು ಸೇವಿಸಿದ್ದಾರೆ. ಸ್ನಾನಕ್ಕೆ, ಕುಡಿಯುವುದಕ್ಕೆ ಮನೆ‌ ಕೆಲಸಕ್ಕೆ ಎಲ್ಲಾದಕ್ಕು ಇದೇ ನೀರು ಬಳಸಿದ್ದು ಆತಂಕ ಮೂಡಿಸಿದೆ. ಸುಮಾರು ಆರವತ್ತಕ್ಕೂ ಅಧಿಕ ಮಂದಿ ಈ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದಾರೆ. ಮೃತ ದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮಹಿಳೆಗೆ ಕರೋನಾ‌ ಇದ್ಯಾ ಇಲ್ವಾ ಎಂಬುದರ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಘಟನೆಯ ಸಂಬಂಧ ಯಲಹಂಕನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top