fbpx
ಸಮಾಚಾರ

20 ವರ್ಷಗಳ ಹಿಂದೆ ಸುದೀಪ್ ಹಾಡಿದ್ದ ಹಾಡಿನ ವಿಡಿಯೋ ಈಗ ವೈರಲ್: ಅಪರೂಪದ ವಿಡಿಯೋ

ನಟ ಕಿಚ್ಚ ಸುದೀಪ್ ಅವರು ಇಪ್ಪತ್ತು ವರ್ಷಗಳ ಹಿಂದೆ ವೇದಿಕೆಯೊಂದರಲ್ಲಿ ಹಾಡಿದ್ದ ಹಾಡಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2001 ರಲ್ಲಿ ತೆರೆಕಂಡ ‘ಹುಚ್ಚ’ ಚಿತ್ರ ಕಿಚ್ಚ ಸುದೀಪ್ ಸಿನಿಮಾ ಕರೀಯರ್ ನಲ್ಲಿ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು. ಹುಚ್ಚ ಸಿನಿಮಾ ಸೂಪರ್ ಹಿಟ್ ಆದ ನಂತರ ಸ್ಟಾರ್ ಹೀರೊ ಆಗಿದ್ದ ಸುದೀಪ್ ಅಂದು ಸುದೀಪ್ ವೇದಿಕೆಯೊಂದರ ಮೇಲೆ ಹಾಡಿದ್ದ ಗಾಯನ ಇಂದು ವೈರಲ್ ಆಗುತ್ತಿದೆ.

ಕಿಚ್ಚ ಸುದೀಪ್ ವೇದಿಕೆ ಮೇಲೆ ‘ಹುಚ್ಚ’ ಸಿನಿಮಾದ ಯಾರೋ ಯಾರೋ ಗೀಚಿಹೋದ ಹಾಡನ್ನು ಹಾಡಿದ್ದಾರೆ. ಸುದೀಪ್ ವೇದಿಕೆ ಮೇಲೆ ಹಾಡುತ್ತಿದ್ದರೆ ಹುಚ್ಚ ಕ್ಯಾರೆಕ್ಟರ್ ಮೈಮೇಲೆ ತರಿಸಿಕೊಂಡ ಅಭಿಮಾನಿಯೊಬ್ಬರು ಕೈಯಲ್ಲಿ ಗುಲಾಬಿ ಹಿಡಿದು ಹುಚ್ಚ ಸಿನಿಮಾದ ಪಾತ್ರದ ರೀತಿಯೇ ನಡೆದುಕೊಂಡು ಸುದೀಪ್ ಬಳಿ ಬರುತ್ತಾರೆ. ಆ ವೇಳೆ ಅಭಿಮಾನಿಯ ಹೆಗಲ ಮೇಲೆ ಸುದೀಪ್ ಕೈ ಹಾಕಿ ಅಪ್ಪುಗೆ ಕೊಡುತ್ತಾರೆ.

 

ವಿಡಿಯೋ ನೋಡಿ👇👇👇

 


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top