fbpx
ಸಮಾಚಾರ

ಕೆಜಿಎಫ್ ಅಧೀರನ ಪಾತ್ರದ ಸ್ಫೂರ್ತಿ ಯಾರು? ಪ್ರಶಾಂತ್ ನೀಲ್ ನೀಲ್ ಹೇಳಿದ್ದೇನು ಗೊತ್ತಾ?

ಕೆಜಿಎಫ್ ಚಿತ್ರದ ಹವಾ ಎಷ್ಟರ ಮಟ್ಟಿಗೆ ಇದೆ ಅಂದರೆ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಅಭಿಮಾನಿಗಳ ಮನ ಗೆದ್ದಿದೆ. ಅಷ್ಟೇ ಅಲ್ಲದೆ ಕೆಜಿಎಫ್-2 ಚಿತ್ರದ ಮೇಲೂ ಬಹಳಷ್ಟು ನಿರೀಕ್ಷೆ ಇದ್ದು, ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಚಿತ್ರದ ಮತ್ತೊಂದು ಪೋಸ್ಟರ್ ಇಂದು ಬಿಡುಗಡೆಯಾಗಿದೆ.

‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್ ದತ್‌ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಇಂದು ಸಂಜು ಅವರ ಜನ್ಮದಿನ. ಮೂರ್ನಾಲ್ಕು ದಿನಗಳ ಹಿಂದೆಯೇ ನಿರ್ದೇಶಕರು ಹೇಳಿದಂತೆ ‘ಅಧೀರ’ನ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಸಂಜು ಅವರ ಪಾತ್ರದ ಕ್ರೂರತೆಯು ಈ ಪೋಸ್ಟರ್‌ ಮೂಲಕ ಅನಾವರಣಗೊಂಡಿದೆ.

 

 

‘ಈ ಅಧೀರ ವೈಕಿಂಗ್ಸ್‌ ಕ್ರೂರ ಮಾರ್ಗದಿಂದ ಸ್ಫೂರ್ತಿ ಪಡೆದಿದ್ದಾನೆ’ ಎಂದು ಪ್ರಶಾಂತ್‌ ನೀಲ್‌ ಕ್ಯಾಪ್ಷನ್‌ ಬರೆದಿದ್ದಾರೆ. ‘ವೈಕಿಂಗ್ಸ್‌’ ಎಂದರೆ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಮುಂದೆ ಓದಿ.

‘ಅಧೀರ’ ಪಾತ್ರ ಸ್ಫೂರ್ತಿ ಪಡೆದಿರೋದು ಹಾಲಿವುಡ್​ನ ಜನಪ್ರಿಯ ಕಿರುತೆರೆ ಧಾರವಾಹಿ ‘ವೈಕಿಂಗ್ಸ್’ನಿಂದ. 2013ರಲ್ಲಿ ಆರಂಭವಾದ ‘ವೈಕಿಂಗ್ಸ್” ಸೀರಿಸ್, ಒಟ್ಟು ಆರು ಸೀಸನ್​ಗಳಲ್ಲಿ ಪ್ರದರ್ಶನಗೊಂಡಿದೆ. ‘ವೈಕಿಂಗ್ಸ್’ ಸೀರಿಸ್​ನ ರಾಗ್ನರ್ ಲಾತ್​ಬ್ರಾಕ್ ಪಾತ್ರದಂತೆಯೇ ‘ಅಧೀರ’ನ ಲುಕ್ ಸ್ಕೆಚ್ ಮಾಡಲಾಗಿದೆ. ‘ಅಧೀರ’ನ ಹೇರ್ ಸ್ಟೈಲ್, ಮುಖದ ಮೇಲಿನ ಟ್ಯಾಟ್ಯೂ ಎಲ್ಲವೂ ವೈಕಿಂಗ್ಸ್ ಪಾತ್ರದ ರೀತಿಯೇ ಇದೆ. ಈ ವಿಚಾರವನ್ನು ಖುದ್ದಾಗಿ ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top