ಫ್ರಾನ್ಸ್ ನಿಂದ ಭಾರತಕ್ಕೆ ಆಗಮಿಸಿರುವ ಐದು ರಾಫೆಲ್ ಯುದ್ಧ ವಿಮಾನಗಳ ಪೈಕಿ ಒಂದು ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದು ಓರ್ವ ‘ಹೆಮ್ಮೆಯ ಕನ್ನಡಿಗ’..
ಹೌದು.. ತೀವ್ರ ಕುತೂಹಲ ಕೆರಳಿಸಿದ್ದ ರಾಫೆಲ್ ಯುದ್ಧ ವಿಮಾನದ ಆಗಮನ ಪೂರ್ಣವಾಗಿದ್ದು, ಈ ಐದು ಯುದ್ಧ ವಿಮಾನಗಳ ಪೈಲಟ್ ಗಳ ತಂಡದಲ್ಲಿ ಕರ್ನಾಟಕ ಮೂಲದ ಓರ್ವ ಪೈಲಟ್ ಕೂಡ ಇದ್ದಾರೆ. ಕರ್ನಾಟಕದ ವಿಜಯಪುರ ಮೂಲದ ಸೈನಿಕರೊಬ್ಬರು ಭಾರತಕ್ಕೆ ರಾಫೆಲ್ ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಬಂದಿದ್ದಾರೆ.
ರುಣ್ ಕುಮಾರ್ 1995ರಿಂದ 2001ರ ವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸೈನಿಕ ಶಾಲೆಯಲ್ಲಿನ ಇವರ ನೋಂದಣಿ ಸಂಖ್ಯೆ 2877.
ಮುಂದೆ 2002ರಲ್ಲಿ ನ್ಯಾಷನಲ್ ಡಿಫೆನ್ಸ್ ಆರ್ಮಿಗೆ ಸೇರ್ಪಡೆಯಾಗಿ ಈಗ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಅಂದ ಹಾಗೆ ಇವರ ತಂದೆ ಎನ್ ಪ್ರಸಾದ್ ಸಹ ಏರಫೋರ್ಸ್ ನಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ಅವರು 2002ರಲ್ಲಿ ವಾಯುಸೇನೆಗೆ ನೇಮಕಾತಿಯಾಗಿದ್ದು ಸುಮಾರು 15 ವರ್ಷಗಳಿಂದ ವಿಜಯಪುರದ ವಾಯು ಸೇನೆಯಲ್ಲೇ ಅರುಣಕುಮಾರ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಭಾರತಕ್ಕೆ 5 ರಫೇಲ್ ಯುದ್ಧ ವಿಮಾನ ತರುವಲ್ಲಿ ಅರುಣಕುಮಾರ ಅವರು ಕಮಾಂಡರ್ ಆಗಿ ಕೆಲಸ ಮಾಡಿದ್ದಾರೆ. ಇದು ಕನ್ನಡಿಗರಿಗೆ ಖುಷಿ ತರುವಂತಹ ವಿಚಾರವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
