fbpx
ಸಮಾಚಾರ

ನಟಿ ಸುಧಾರಾಣಿಯನ್ನು ಮಧ್ಯರಾತ್ರಿ ಕಾಯಿಸಿದ ಖಾಸಗಿ ಆಸ್ಪತ್ರೆಗೆ ಅರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ

ಕಿಡ್ನಿಸ್ಟೋನ್ ತೊಂದರೆಯಿಂದ ಬಳಲುತ್ತಿದ್ದ ಚಿತ್ರನಟಿ ಸುಧಾರಾಣಿ ಆವರ ಸಹೋದರನ ಮಗಳಿಗೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ, ಪ್ರಮಾದವೆಸಗಿರುವ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶ್ರೀರಾಮುಲು ಹೇಳಿದರು.

 

ಕೋವಿಡ್‌ ಸೇರಿದಂತೆ ಇನ್ನಿತರ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಣೆ ಮಾಡಿದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಏನಿದು ಘಟನೆ?
ಸ್ಯಾಂಡಲ್‍ವುಡ್ ನಟಿ ಸುಧಾರಾಣಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಅಣ್ಣನ ಮಗಳಿಗೆ ಚಿಕಿತ್ಸೆ ಕೊಡಿಸಲು ತಡರಾತ್ರಿ ಪರದಾಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅಣ್ಣನ ಮಗಳನ್ನು ಕರೆತಂದ ಸುಧಾರಾಣಿ ಅವರಿಗೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಧಾರಾಣಿ ಅವರು, ಕಿಡ್ನಿ ಸ್ಟೋನ್‍ನಿಂದ ಬಳಲುತ್ತಿದ್ದ ಯುವತಿಯನ್ನು ಸೌಜನ್ಯಕ್ಕೂ ಚೆಕ್ ಮಾಡದೆ ವೆಂಟಿಲೇಟರ್ ಮತ್ತು ಬೆಡ್‍ಗಳಿಲ್ಲ ಅಂತ ಗಂಟೆಗಳ ಕಾಲ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದ್ದಾರೆ. ಪ್ರಥಮ ಚಿಕಿತ್ಸೆಯಾದರೂ ನೀಡಿ ಎಂದರೇ ವೆಂಟಿಲೇಟರ್ ಇಲ್ಲ, ಬೆಡ್ ಇಲ್ಲ ಎಂಬುದನ್ನೇ ಹೇಳುತ್ತಾರೆ. ವೈದ್ಯರೇ ಹೀಗೆ ಮಾಡಿದರೆ ಸಾಮಾನ್ಯ ಜನರಿಗೆ ಯಾವ ಸ್ಥಿತಿ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಬೇಸರಗೊಂಡ ಸುಧಾರಾಣಿ, ಪೊಲೀಸ್​ ಆಯುಕ್ತ ಭಾಸ್ಕರ್ ​ರಾವ್​ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಸಿಬ್ಬಂದಿ ಪೇಷಂಟ್​​ನ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸುಧಾರಾಣಿ ಅಪೋಲೊ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವೈದ್ಯರು ದೇವರ ಸಮಾನ ಅಂತೀವಿ.. ಆದ್ರೆ ಇಲ್ಲಿ‌‌ನ ಪರಿಸ್ಥಿತಿ ಯೇ ಬೇರೆ ಇದೆ.‌ ನಮ್ಮನ್ನು ರಾತ್ರಿ ಒಂದು ಗಂಟೆಗಳ ಕಾಲ ಹೊರ ನಿಲ್ಲಿಸಿದ್ದರು. ಕಮಿಷನರ್ ಗೆ ಫೋನ್ ಮಾಡಿದ ಬಳಿಕ ಒಳಗೆ ಸೇರಿಸಿಸಿಕೊಂಡಿದ್ದಾರೆ,” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top