fbpx
ಸಮಾಚಾರ

ಸ್ಟುವರ್ಟ್‌ ಬ್ರಾಡ್‌ರ 500 ವಿಕೆಟ್‌ಗೆ ಸಾಧನೆಗೆ ಮನಮುಟ್ಟುವ ಸಂದೇಶ ನೀಡಿದ ಯುವರಾಜ್ ಸಿಂಗ್

ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ ಕೆಲವೇ ಕೆಲವು ಬೌಲರ್‌ಗಳಲ್ಲಿ ಒಬ್ಬರಾಗಿ ಬ್ರಾಡ್ ಗುರುತಿಸಿಕೊಂಡಿದ್ದಾರೆ. ಈ ವಿಶೇಷ ಸಾಧನೆ ಮೆರೆದಿರುವ ಬ್ರಾಡ್‌ಗೆ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್, ಕೆಚ್ಚೆದೆಯ ಮಹಾರಾಜ ಯುವರಾಜ್ ಸಿಂಗ್ ಮನ ಮುಟ್ಟುವ ರೀತೀಲಿ ಸಂದೇಶ ಬರೆದು ಅಭಿನಂದಿಸಿದ್ದಾರೆ.

 

 

ಇಂದು ಬ್ರಾಡ್ ಅವರ ವಿಚಾರವಾಗಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಯುವಿ, ನಾನು ಸ್ಟುವರ್ಟ್ ಬ್ರಾಡ್ ಬಗ್ಗೆ ಏನೇ ಬರೆದರೂ ಹಾಗೂ ಏನೇ ಪೋಸ್ಟ್ ಹಾಕಿದರು. ಜನರು ಅದನ್ನು ನಾನು ಆರು ಬಾಲಿಗೆ ಆರು ಸಿಕ್ಸ್ ಹೊಡೆದ ವಿಚಾರಕ್ಕೆ ಲಿಂಕ್ ಮಾಡುತ್ತಾರೆ. ಆದರೆ ಇಂದು ನನ್ನ ಅಭಿಮಾನಿಗಳಲ್ಲಿ ನಾನು ಮನವಿ ಮಾಡುತ್ತೇನೆ. ಏನೆಂದರೆ ಇಂದು ಬ್ರಾಡ್ ಮಾಡಿರುವ ಸಾಧನೆಗೆ ನೀವು ಮೆಚ್ಚುಗೆ ಸೂಚಿಸಬೇಕು ಎಂದು ಬರೆದುಕೊಂಡಿದ್ದಾರೆ

2007ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬ್ರಾಡ್‌ ಇದುವರೆಗೆ 140 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 501 ವಿಕೆಟ್‌ ಗಳಿಸಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 7ನೇ ಬೌಲರ್‌ ಮತ್ತು ನಾಲ್ಕನೇ ವೇಗಿ ಎನಿಸಿಕೊಂಡಿದ್ದಾರೆ. ಅಂದಹಾಗೆ 2007 ಉದ್ಘಾಟನಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಯುವರಾಜ್‌ ಸಿಂಗ್‌, ಸ್ಟುವರ್ಟ್‌ ಬ್ರಾಡ್‌ನ ಎಲ್ಲಾ ಆರು ಎಸೆತಗಳಲ್ಲೂ ಸಿಕ್ಸರ್‌ ಬಾರಿಸಿ ವಿಶ್ವ ದಾಖಲೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top