fbpx
ಸಮಾಚಾರ

ಅಯೋಧ್ಯೆ ರಾಮಮಂದಿರ ನಿರ್ಮಾಣ ಶಿಲಾನ್ಯಾಸಕ್ಕೆ ಮೂಹೂರ್ತ ಫಿಕ್ಸ್ ಮಾಡಿದ್ದು ಕನ್ನಡಿಗ

ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ದಿನಾಂಕ ಸಹ ನಿಗದಿಯಾಗಿದೆ. ಇದೇ ಮೂಹೂರ್ತದಲ್ಲಿ ಶಿಲಾನ್ಯಾಸ ಮಾಡಬೇಕು ಎಂದು ಬೆಳಗಾವಿಯ ವಿದ್ವಾಂಸರೊಬ್ಬರು ಮೂಹೂರ್ತ ನಿಗದಿಪಡಿಸಿದ್ದಾರೆ. ಆಗಸ್ಟ್ 5 ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆ ಇಟ್ಟು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಶುಭ ಮೂಹೂರ್ತವನ್ನು ಬೆಳಗಾವಿಯ ಎನ್ ಆರ್ ವಿಜಯೇಂದ್ರ ಶರ್ಮಾ ಫಿಕ್ಸ್ ಮಾಡಿದ್ದಾರೆ.

75 ವರ್ಷದ ಪಂಡಿತ್ ಶರ್ಮಾ ಕಳೆದ ಹಲವು ವರ್ಷಗಳಿಂದ ರಾಮಜನ್ಮ ಭೂಮಿ ಚಳವಳಿಯ ಜೊತೆ ಗುರುತಿಸಿಕೊಂಡಿದ್ದರು. ಧಾರ್ಮಿಕವಾಗಿ ಮಹತ್ವದ ಕಾರ್ಯಕ್ರಮಕ್ಕಾಗಿ ದಿನಾಂಕವನ್ನು ನಿಗದಿಪಡಿಸಲು ಈ ವರ್ಷದ ಫೆಬ್ರವರಿಯಲ್ಲಿ ಸಂಘಟಕರು ಸಂಪರ್ಕಿಸಿದ್ದರು. ಶರ್ಮಾ ಅವರು ಅಕ್ಷ ತೃತೀಯಾ ದಿನ ಗುರುತಿಸಿದ್ದರು, ಆದರೆ ಲಾಕ್ ಡೌನ್ ಇದ್ದ ಕಾರಣ ಅಂದು ಶಿಲನ್ಯಾಸ ನೆರವೇರಿಸಲಾಗಲಿಲ್ಲ.

ಹರಿದ್ವಾರದ ಭಾರತಮಾತಾ ಮಂದಿರದ ಗೋವಿಂದದೇವಗಿರಿ ಮಹಾರಾಜರ ಮೂಲಕ ರಾಮ ಮಂದರಿ ಟ್ರಸ್ಟ್ ಎನ್ ಆರ್ ವಿಜಯೇಂದ್ರ ಶರ್ಮಾ ಅವರನ್ನು ಸಂಪರ್ಕ ಮಾಡಿದೆ. ಒಟ್ಟು ನಾಲ್ಕು ಶುಭ ದಿನಾಂಕಗಳನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶರ್ಮಾ ಅವರು ಸೂಚಿಸಿದ್ದಾರೆ. ಈ ಪೈಕಿ ಆಗಸ್ಟ್​​ ತಿಂಗಳ 5 ನೇ ತಾರೀಖನ್ನು ಟ್ರಸ್ಟ್ ಆಯ್ಕೆ ಮಾಡಿಕೊಂಡು ಇದಕ್ಕಾಗಿ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ.

ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ವಿದ್ವಾಂಸ ಎನ್ ಆರ್ ವಿಜಯೇಂದ್ರ ಶರ್ಮಾ, ನಮ್ಮ ಶಾಸ್ತ್ರಗಳಲ್ಲಿ ದೀಪಾವಳಿ, ಯುಗಾದಿ, ವಿಜಯ ದಶಮಿ ಶೇಷ್ಠವಾಗಿದೆ. ಮೂಹೂರ್ತ ನಿಗದಿ ಮಾಡುವ ಬಗ್ಗೆ ಅನೇಕ ನಿಬಂಧನೆಗಳು ಇವೆ. ನಾನು ಕೊಟ್ಟ ದಿನಾಂಕವನ್ನು ಪರಿಗಣನೆ ಮಾಡಿದ್ದು ಹೆಮ್ಮೆ. ರಾಮ ಮಂದಿರ ನಿರ್ಮಾಣದ ಹಿಂದೆ ದೊಡ್ಡ ಇತಿಹಾಸವಿದೆ ಎಂದರು.

‘ಶ್ರೀರಾಮ ಮಂದಿರದ ಟ್ರಸ್ಟಿ ಸ್ವಾಮಿ ಗೋವಿಂದ್‌ ದೇವಗಿರಿ ಅವರು ಕರೆ ಮಾಡಿ, ಶುಭ ಮುಹೂರ್ತವಿರುವ ದಿನಾಂಕಗಳನ್ನು ತಿಳಿಸುವಂತೆ ಕೋರಿದ್ದರು. ಜುಲೈ 29ರ ಬೆಳಿಗ್ಗೆ 9ರ ನಂತರ, ಜುಲೈ 31ರ ಬೆಳಿಗ್ಗೆ 7ರಿಂದ 9ರವರೆಗೆ, ಆ.3ರ ಬೆಳಿಗ್ಗೆ 10ರ ನಂತರ ಹಾಗೂ ಆ.5ರಂದು ಇಡೀ ದಿನ ಶುಭ ಮುಹೂರ್ತವಿದೆ ಎಂದು ಜುಲೈ 15ರಂದು ಪತ್ರ ಬರೆದು ತಿಳಿಸಿದ್ದೆ. ಇದರಲ್ಲಿ ಆ.5 ಅಂತಿಮಗೊಂಡಿದೆ’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top