fbpx
ಸಮಾಚಾರ

ನಟಿ ರಿಷಿಕಾ ಸಿಂಗ್, ಜೈಜಗದೀಶ್ ಮಗಳು ಇದ್ದ ಕಾರು ಅಪಘಾತ: ಇಬ್ಬರೂ ಆಸ್ಪತ್ರೆಗೆ ದಾಖಲು

ನಿರ್ದೇಶಕ ಹಾಗೂ ನಿರ್ಮಾಪಕ ರಾಜೇಂದ್ರಸಿಂಗ್​ ಬಾಬು ಪುತ್ರಿ ನಟಿ ರಿಷಿಕಾ ಸಿಂಗ್​ ಕಾರು ಅಪಘಾತಕ್ಕೀಡಾಗಿದೆ. ಸ್ನೇಹಿತೆಯ ಮನೆಯಿಂದ ವಾಪಾಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ರಿಷಿಕಾ ಸಿಂಗ್​ ಜೊತೆಗೆ ಸಂಬಂಧಿ ಜೈ ಜಗದೀಶ್ ಮಗಳು ಅರ್ಪಿತಾ ಕೂಡ ಕಾರಿನಲ್ಲಿದ್ದರು.

ಅಪಘಾತದಲ್ಲಿ ರಿಷಿಕಾಗೆ ಹಾಗೂ ಗೆಳತಿ ಅರ್ಪಿತಾಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ರಿಷಿಕಾ ಹಾಗೂ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ರಿಷಿಕಾ ಪ್ರಯಾಣ ಮಾಡುತ್ತಿದ್ದ ಫಾರ್ಚೂನರ್ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಎರಡು ದಿನದ ಹಿಂದಿನ ಘಟನೆ
ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಸ್ಥಳಕ್ಕೆ ಪೊಲೀಸರು 9 ಗಂಟೆ ಸುಮಾರಿಗೆ ಬಂದು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದು 48 ಗಂಟೆಗಳಾದರೂ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top