fbpx
ಸಮಾಚಾರ

“ನಟ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ, ಅವರನ್ನು ಕೊಲೆ ಮಾಡಲಾಗಿದೆ” 26 ಅಂಶಗಳನ್ನು ನೀಡಿದ ಸುಬ್ರಮಣಿಯನ್ ಸ್ವಾಮಿ

ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಅಲ್ಲದೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿ ಬಂದಿತ್ತು.

ಸುಶಾಂತ್ ಆತ್ಮಹತ್ಯೆಯ ಬಗ್ಗೆ ತನಿಖೆಯಾಗಬೇಕು ಅಂತ ಸುಶಾಂತ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಸದ್ಯ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು ಆತ್ಮಹತ್ಯೆಗೂ ಮುನ್ನ ಸುಶಾಂತ್ ಯಾರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದರು. ಯಾರ ಜೊತೆ ಚಾಟ್ ಮಾಡಿದ್ದರುಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಎಂದು ಬಿಜೆಪಿ ಸಂಸದ ಸುಬ್ರಮಣಿನ ಸ್ವಾಮಿ ಹೇಳಿದ್ದಾರೆ.

 

 

ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದು, ಹತ್ಯೆಯ ಸಿದ್ಧಾಂತ ಪ್ರತಿಪಾದಿಸುವ 26 ಅಂಶಗಳನ್ನು ಹಂಚಿಕೊಂಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಏಕೆ ಅಂದುಕೊಳ್ಳಬೇಕು ಎಂದು ಬರೆದಿರುವ ಅವರು ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಆತ್ಮಹತ್ಯೆ ಸಿದ್ಧಾಂತ ಹಾಗೂ ಹತ್ಯೆಯ ಸಿದ್ಧಾಂತದ ಅಂಶಗಳು ನಮೂದಿಸಲ್ಪಟ್ಟಿವೆ.

ಸುಶಾಂತ್ ಕತ್ತಿನ ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯಾವುದೇ ಗುರುತು ಇರಲಿಲ್ಲ ಬಾಯಿಯಿಂದ ನೊರೆ ಬಂದಿಲ್ಲ, ಆತ್ಮಹತ್ಯೆ ಸಂದರ್ಭದಲ್ಲಿ ಆಗುವಂತೆ ಕಣ್ಣು ಹೊರಗೆ ಬಂದಿಲ್ಲ ಇಷ್ಟೂ ಅಲ್ಲದೆ ಸುಶಾಂತ್ ಹಿಂದಿನ ದಿನ ಬೆಳಗ್ಗೆ ವಿಡಿಯೋ ಗೇಮ್ ಆಡಿಕೊಂಡಿದ್ದ ಎಂದು ಬರೆದಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವವರ ಕಾಲ ಕೆಳಗೆ ಒಂದು ಚೇರ್ ಇತ್ತು, ಯಾರೋ ಸುಶಾಂತ್ ನನ್ನು ನೇಣಿಗೇರಿಸಿ ನಂತರ ಆ ಟೇಬಲ್ ಅನ್ನು ಆತನ ಕಾಲ ಕೆಳಗೆ ಇಟ್ಟಿದ್ದಾರೆ. ಜೊತೆಗೆ ಆತನ ದೇಹದ ಮೇಲೆ ಥಳಿಸಿರುವ ಗುರುತುಗಳಿಗೆ ಎಂದು ಹೇಳಿದ್ದಾರೆ, ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಮಾತನಾಡಿ ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರುವುದಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top