fbpx
ಸಮಾಚಾರ

ಶಿವಣ್ಣನ ಮನೆಯಲ್ಲಿ ಸೇರಿದ್ದ ಚಿತ್ರರಂಗದ ಸಭೆಗೆ ಗೈರಾಗಿದ್ದು ಯಾಕೆ? ಕಾರಣ ಬಿಚ್ಚಿಟ್ಟ ನಟ ಜಗ್ಗೇಶ್

ಕನ್ನಡ ಚಿತ್ರರಂಗವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಡಾ. ಶಿವರಾಜ್‌ಕುಮಾರ್ ಅವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಚಂದನವನದ ಸಮಸ್ಯೆಗಳ ಕುರಿತು ಶಿವಣ್ಣ ಮನೆಯಲ್ಲಿ ಸಭೆ ಮಾಡಲಾಗಿದೆ. ಅದರಲ್ಲೂ ಬುಧವಾರ ನಡೆದ ಸಭೆಯಲ್ಲಿ ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಇದ್ದರು. ಆದರೆ, ನಟ ಜಗ್ಗೇಶ್‌ ಮಾತ್ರ ಕಾಣಿಸಲಿಲ್ಲ. ಯಾಕೆ ಜಗ್ಗೇಶ್ ಸಭೆಯಿಂದ ದೂರ ಉಳಿದರು? ಇದಕ್ಕೆ ಕಾರಣವೇನು ಅಂತೀರಾ? ಮುಂದೆ ಓದಿ

 

 

ಚಿತ್ರರಂಗದ ಬಹುತೇಕ ಕಲಾವಿದರ ಒಗ್ಗಡೂವಿಕೆಗೆಯಲ್ಲಿ ಈ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಹಿರಿಯ ಕಲಾವಿದರಾದ ರವಿಚಂದ್ರನ್, ರಮೇಶ್ ಅರವಿಂದ್​,ಉಪೇಂದ್ರ, ಪುನೀತ್ ರಾಜ್‌ಕುಮಾರ್, ಯಶ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಗಣೇಶ್, ದುನಿಯಾ ವಿಜಯ್, ನಿರ್ಮಾಪಕ ಕೆಪಿ ಶ್ರೀಕಾಂತ್, ಪುಷ್ಕರ್ ಮಲ್ಲಿಕಾರ್ಜುನಯ್ಯ ಭಾಗಿದ್ದರು. ಆದರೆ, ಚಿತ್ರರಂಗದ ಈ ಸಭೆಗೆ ಜಗ್ಗೇಶ್‌ ಆಗಮಿಸಿರಲಿಲ್ಲ. ಅವರು ಕೂಡ ಚಂದನವನದಲ್ಲಿ 4 ದಶಕಗಳ ಅನುಭವ ಹೊಂದಿರುವ ನಟ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ಜಗ್ಗೇಶ್‌ಗೆ ಪ್ರಶ್ನೆ ಮಾಡಿದ್ದಾರೆ.

ಕಾರಣ ಬಿಚ್ಚಿಟ್ಟ ಜಗ್ಗೇಶ್:
‘ಅಣ್ಣ ನೀವು ಯಾಕೆ ಹೋಗಿಲ್ಲ ಇವತ್ತು ಶಿವಣ್ಣ ಮನೆಗೆ? ನಿಮಗೆ ಆಹ್ವಾನ ಬಂದಿಲ್ವ’ ಎಂದು ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಜಗ್ಗೇಶ್‌ ಅವರಿಗೆ ಕೇಳಿದ್ದರು. ಅದಕ್ಕೆ ಅಲ್ಲಿಯೇ ಉತ್ತರ ನೀಡಿರುವ ಜಗ್ಗೇಶ್ “ಯಾವುದೆ ಕಾರಣಕ್ಕೂ ಕೊರೊನಾ ಔಷದ ಬರುವವರೆಗೂ ಎಲ್ಲಿಯೂ ಹೋಗುವುದಿಲ್ಲ. ಯಾರ ಭೇಟಿಯು ಮಾಡುವುದಿಲ್ಲ. ಶಿವಣ್ಣ ಪಾಪ ಕರೆದರು ನಾನೆ ಬರುವುದಿಲ್ಲ ಎಂದು ತಿಳಿಸಿದೆ. ನನ್ನ ಸಂಪೂರ್ಣ ಬೆಂಬಲ ನಮ್ಮ ಉದ್ಯಮಕ್ಕಿದೆ. ಎಲ್ಲಾ ಕಾರ್ಯಕ್ಕೆ ವೈಯಕ್ತಿಕವಾಗಿ ಹೋಗದಿದ್ದರು Online ಚರ್ಚೆ ನಡೆಯುತ್ತಿದೆ. ನೀವು ಕ್ಷೇಮವಾಗಿರಿ ಧನ್ಯವಾದ.” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top