fbpx
ಸಮಾಚಾರ

ವಿರಾಟ್‌ ಕೊಹ್ಲಿಗೆ ಸಂಕಷ್ಟ: ಕೊಹ್ಲಿ ಹಾಗೂ ತಮನ್ನಾರನ್ನು ಹೈಕೋರ್ಟ್‌ಗೆ ಅರ್ಜಿ! ಬಂಧಿಸುವಂತೆ ಆಗ್ರಹ

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಹಾಗೂ ಬಹುಭಾಷಾ ನಟಿ ತಮನ್ನಾ ವಿರುದ್ಧ ಮದ್ರಾಸ್​ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಆನ್‌ಲೈನ್‌ ಜೂಟಾಟವನ್ನು ಉತ್ತೇಜನ ನೀಡುತ್ತಿದ್ದಾರೆಂದು ಆರೋಪಿಸಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಚೆನ್ನೈ ಮೂಲದ ವಕೀಲರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಜೂಜಾಟಕ್ಕೆ ಬಳಸಿದ ಹಣವನ್ನು ಹಿಂತಿರುಗಿಸಲು ಸಾಧ್ಯವಾಗದ ಕಾರಣ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಅರ್ಜಿದಾರ ಈ ಪ್ರಕರಣವನ್ನು ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ. ಮದ್ರಾಸ್‌ ಹೈಕೋರ್ಟ್‌ನಲ್ಲಿ ದೂರು ಅರ್ಜಿ ಸಲ್ಲಿಸಿರುವ ಚೆನ್ನೈ ಮೂಲದ ವ್ಯಕ್ತಿ, ಆನ್‌ಲೈನ್‌ ಜೂಜಾಟದಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಈ ಕಾರಣದಿಂದ ಇಂತಹ ಆಪ್‌ಗಳನ್ನು ರದ್ದು ಮಾಡಬೇಕೆಂದು ಅರ್ಜಿದಾರ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ

ಯುವಕರನ್ನು ಮನಸ್ಸನ್ನು ಆನ್‌ಲೈನ್‌ ಜೂಜಾಟಕ್ಕೆ ಸೆಳೆಯಲು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಮುಂತಾದ ಸೆಲೆಬ್ರಿಟಿಗಳನ್ನು ಜಾಹೀರಾತುಗಳಲ್ಲಿ ಜೂಜು ಆನ್‌ಲೈನ್‌ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಹಾಗಾಗಿ, ಈ ಇಬ್ಬರೂ ಸೆಲೆಬ್ರಿಟಿಗಳನ್ನು ಬಂಧಿಸುವಂತೆ ವಕೀಲರು, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಮಂಗಳವಾರ ಎತ್ತಿಕೊಳ್ಳಲಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top